2010ರ ಸೆಪ್ಟೆಂಬರ್ 20ರಂದು ಕಾರ್ಕಳದಲ್ಲೊಂದು ಬೃಹತ್ ಪ್ರತಿಭಟನೆ ನಡೆಯಿತು. ಅನಧಿಕೃತ ದೇವಾಲಯಗಳನ್ನು ನೆಲಸಮಗೊಳಿಸಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಹಿಂದೂಪರ ಸಂಘಟನೆಗಳು ಬೀದಿಗಿಳಿದಿದ್ದವು.
ಕಡ್ತಲದ ಮಟ್ಟಿಗೆ ಅದೊಂದು ಸಕಾಲಿಕ, ಒಳ್ಳೆಯ ಹೋರಾಟವೇ. ದೇವಸ್ಥಾನ ಕಳೆದುಕೊಳ್ಳುವುದರಲ್ಲಿ ಕಡ್ತಲ ಗ್ರಾಮವೂ ಸೇರಿತ್ತು.
ಊರು, ಅದರ ಚರಿತ್ರೆ, ಆರಾಧ್ಯ ದೈವದ ಜತೆಗಿನ ಭಾವನಾತ್ಮಕ ಸಂಬಂಧದ ಅರಿವಿಲ್ಲದ, ಬುರುಡೆಯೊಳಗೆ ಕನಿಷ್ಠ ಬುದ್ದಿ ಎಂಬುದೊಂದು ಇಲ್ಲದ, ಊರಿನ ಇತಿಹಾಸ, ಪ್ರಮುಖ ಘಟನೆಗಳ ಬಗ್ಗೆ ಅರಿವಿಲ್ಲದ, ಅರಿಯಲು ಪ್ರಯತ್ನಪಡದ ಗ್ರಾಮಾಡಳಿತದ ಬುದ್ದಿರಹಿತ ಅಧಿಕಾರಿಗಳೆನಿಸಿಕೊಂಡಿರುವವರಿಂದ ಆದ ಪ್ರಮಾದವಿದು.
ಒಟ್ಟಾರೆ ಕಡ್ತಲದಲ್ಲಿ ದುರ್ಗಾಪರಮೇಶ್ವರಿ ಎಂಬ ದೇವಸ್ಥಾನ ಇದೆ. ನೀವು ನೆಲಸಮಗೊಳಿಸಬಹುದು ಎಂದು ಸರ್ಕಾರಕ್ಕೆ ಏಕಾಏಕಿ ವರದಿ ಕಳುಹಿಸಿಕೊಟ್ಟರು.
ಊರಿನ ಜನ ಎದ್ದುನಿಂತರು. ದೇವಸ್ಥಾನ ಉಳಿಸಲು ಪಣ ತೊಟ್ಟರು. ಜೀರ್ಣೋದ್ಧಾರಗೊಂಡು ಭಕ್ತರನ್ನು ಸೆಳೆಯುತ್ತಿದ್ದ ದೇವಸ್ಥಾನ ನೆಲಸಮಗೊಳಿಸುವುದರ ವಿರುದ್ಧ ಹಲವು ಸಭೆಗಳು ನಡೆದವು. ಗಣೇಶೋತ್ಸವದ ಸಾರ್ವಜನಿಕ ಸಭೆಯಲ್ಲೂ ಭಾಷಣ ಮೊಳಗಿತು. ಕೊನೆಗೆ ಕಾರ್ಕಳದಲ್ಲೊಂದು ಬೃಹತ್ ಪ್ರತಿಭಟನೆ ನಡೆಯಿತು. ಇದೇ ರೀತಿ ನೆಲಸಮಗೊಳ್ಳುವ ಆತಂಕವಿದ್ದ ಅನೇಕ ದೇವಸ್ಥಾನಗಳ ಮುಖ್ಯಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೊನೆಗೂ ದೇವಸ್ಥಾನದ ಮಹತ್ವ, ಅದರಿಂದ ಸಾರ್ವಜನಿಕ ಸಂಚಾರಕ್ಕೇನೂ ಅಡೆತಡೆ ಆಗದಿರುವುದು, ಅದರ ಅಧಿಕೃತತೆಯ ಬಗ್ಗೆ ಸರ್ಕಾರಕ್ಕೆ ಮನವರಿಕೆಯಾಯಿತು. ವಿವಾದ ಅಲ್ಲಿಗೇ ತಣ್ಣಗಾಗಿ ಕೊನೆಗೂ ಬೊಬ್ಬರ್ಯ ದುರ್ಗಾಪರಮೇಶ್ವರಿಯ ಪೂಜೆಯ ಗಂಟೆ ನಿರಾತಂಕವಾಗಿ ಡಣ ಢಣ ಸದ್ದು ಮಾಡಿತು.
ಇದರ ಮಧ್ಯೆ ನಮ್ಮದೇ ಬಂಧುಗಳ ಮನೆಯ ಮೇಲ್ಭಾಗದ ಗುಡ್ಡದಲ್ಲಿ ಸೋಮನಾಥ ಕಲ್ಲು ಪತ್ತೆಯಾಯಿತು. ಬೃಹತ್ ಯಂತ್ರ, ಕಂಪ್ರೆಸರ್ ಬಳಸಿ ಲಘು ಸ್ಫೋಟಕ ಇಟ್ಟು ದೊಡ್ಡ ಸಾಬೂನು ಕೇಕ್ ರೀತಿಯಲ್ಲಿ ಬಂಡೆಗಳನ್ನು ಕತ್ತರಿಸಿ ತೆಗೆಯುತ್ತಿದ್ದರು. ಕೆಂಪನೆಯ ಬಹಳ ಅಪರೂಪದ ಕಲ್ಲು ಅದು. ಈ ‘ಘನಕಾರ್ಯ’ದಲ್ಲಿ ನಮ್ಮ ಕುಟುಂಬವೂ ಹಿಂದೆ ಬೀಳಲಿಲ್ಲ. ಮನೆಯ ಮುಂದಿನ ಬೆಟ್ಟದಲ್ಲಿ ಮತ್ತಷ್ಟು ಸೋಮನಾಥ ಕಲ್ಲು ಪತ್ತೆಯಾಯಿತು. ಆ ಬೆಟ್ಟಕ್ಕೂ ಮಂಗಳೂರು ಮೂಲದ ಗ್ರಾನೈಟ್ ಉದ್ಯಮಿಯೊಬ್ಬರು ಬಂದು ಲಗ್ಗೆಇಟ್ಟರು. ಕೆಲಕಾಲ ಅದೂ ನಡೆಯಿತು. ಹಣ ಹಂಚಿತಿನ್ನಲು ಹತ್ತಾರುಮಂದಿ ಹುಟ್ಟಿಕೊಂಡರು. ರಾತೋರಾತ್ರಿ ಬೃಹತ್ ಕಲ್ಲಿನ ಗಟ್ಟಿಗಳ ಸಾಗಣೆ ನಡೆಯಿತು. ಅದರ ಬಳಿಕ ಪಂಚಾಯಿತಿ ಹಿಂಭಾಗ (ಕೇರಾಫ್ ನಾರಾಯಣ ಪೂಜಾರಿ ಅವರ ಸೇಂದಿ ಅಂಗಡಿ ಬಳಿ) ಇದ್ದ ಗುಂಡುಕಲ್ಲುಗಳ ಮೇಲೂ ಕಲ್ಲು ತೆಗೆಯುವವರ ಕಣ್ಣು ಬಿತ್ತಾದರೂ ಕಾನೂನು ತೊಡಕಿನಿಂದ ಅದು ಸಾಧ್ಯವಾಗಲಿಲ್ಲ. ಇವೆಲ್ಲಕ್ಕೆ ಪರವಾನಿಗೆ ಇತ್ತೋ ಇಲ್ಲವೋ ದೇವರೇ ಬಲ್ಲ. ನಮ್ಮಂಥ ಸಣ್ಣ ಹುಡುಗರಿಗೆ ಅವೆಲ್ಲ ಅರ್ಥವಾಗುವಂಥದ್ದೂ ಆಗಿರಲಿಲ್ಲ. ಆದರೆ, ಸುಂದರ ಬೆಟ್ಟಗಳು ಆಕಾರ ಕಳೆದುಕೊಂಡವು. ಅರ್ಧಂಬರ್ಧ ಓದಿ ಊರಿನಲ್ಲೇ ಉಳಿದುಕೊಂಡವರು ‘ಟಿಂಬರು ಮರ್ಚಂಟು’ಗಳಾದರು, ಕಾಲೇಜಿನಿಂದ ವಾಶ್‌ಔಟ್ ಅನಿಸಿಕೊಂಡ ಧಡೂತಿಗಳು ಕಲ್ಲು ಉದ್ಯಮಿಗಳಾದರು. ಇನ್ನೂ ಉಳಿದದ್ದು ಭೂಮಿ. ಇದೇ ಸಂತಾನಕ್ಕೆ ಸೇರಿದ ಹಲವರು ‘ರಿಯಲ್ ಎಸ್ಟೇಟ್’ ಹೆಸರಿನಲ್ಲಿ ದಂಧೆ ಆರಂಭಿಸಿದರು.
ಹೀಗೆ ಕಡ್ತಲದ ಹಸಿರು ನಾಶವಾಗುತ್ತಲೇ ಇದೆ. ಜಲ ಬತ್ತುತ್ತಿದೆ. ಬಂಡೆ ಗುಡ್ಡಗಳು ಬೋಳಾಗುತ್ತಿವೆ.
ಪಾಂಡವರ ಅಗಳಿನ ಕಥೆ ಅಲ್ಲಿಗೇ ನಿಲ್ಲುವುದಿಲ್ಲ. ಮೈದಾನದಲ್ಲಿ ಹರಿದ ನೀರು ಕಂಟೆಬೆಟ್ಟಿನ ಭೂಮಿಯಲ್ಲಿ ಒಟ್ಟಾರೆ ಹರಿದು ಎಲ್ಲಿಯೋ ಸೇರಿ ಅಕ್ಷರಶಃ ಪೋಲಾಗುತ್ತಿದೆ. ಜತೆಗೆ ಮೈದಾನದ ಮಣ್ಣು ಕೊಚ್ಚಿಹೋಗುತ್ತಿದೆ. ವಿಶಾಲವಾದ ಜಾಗದಲ್ಲಿ ಶಾಲೆಗೆ ಸುಂದರ ಮೈದಾನ ನಿರ್ಮಾಣ ಆಯಿತು ಎಂದು ನಾವೂ ಒಂದು ಹಂತಕ್ಕೆ ಖುಷಿಪಟ್ಟೆವು. ಆದರೆ, ಆ ಗುಡ್ಡವನ್ನೇ ಊರಿನ ಶಾನಭೋಗರೂ (ಬುರುಡೆಯೊಳಗೆ ಕನಿಷ್ಠ ಬುದ್ದಿ ಎಂಬುದೊಂದು ಇಲ್ಲದ, ಕಾಸಿಗಾಗಿಯೇ ಹುಟ್ಟಿದ), ಅವರ ಜತೆಗಿನ ಉಗ್ರಾಣಿಯೂ ಒಟ್ಟಾಗಿ ಯಾರ್ಯಾರದೋ ಹೆಸರಿಗೆ ಬರೆದುಕೊಟ್ಟರು. ಅಂಥವರ ಪಾಲಿಗೆ ‘ಸುಭೇದಾರಿಕೆಯೂ’ ಸಿಕ್ಕಿತು. ಮೈದಾನ ವಿಸ್ತರಣೆಗೆ ಮುಂದಾಗಿ ಜೆಸಿಬಿ ತಂದವರು ದುಡ್ಡು ಮಾಡಿದರು. ಅದಕ್ಕೂ ಮುನ್ನ ಶಾಲಾ ಆವರಣದಲ್ಲಿ ಗಿಡನೆಡಲು ಗುತ್ತಿಗೆ ವಹಿಸಿಕೊಂಡವರಿದ್ದಾರೆ!. ಅವರ ಅಮೃತ ಹಸ್ತದಿಂದ ನೆಟ್ಟ ಗಿಡಗಳು ಸ್ವರ್ಗವಾಸಿಯಾಗಿವೆ. ಆ ಶಾಲೆಯಲ್ಲಿ ಓದಿದವರೇ ಶಾಲೆಯ ಜಾಗ ತನ್ನದು ಎಂದು ವಾದಿಸಿ ವಿಶಾಲವಾದ ಮೈದಾನದ ಒಂದು ಭಾಗದಲ್ಲಿ ವಕ್ಕರಿಸಿಬಿಟ್ಟರು. ಅದನ್ನು ತೆರವು ಮಾಡಬೇಕೆಂಬ ಪ್ರಜ್ಞೆ ಶಾಲಾ ಆಡಳಿತದಲ್ಲಾಗಲೀ ಊರ ಉದ್ದಾರವನ್ನು ಗುತ್ತಿಗೆ ಪಡೆದವರಿಗಾಗಲೀ ಮೂಡಲೇ ಇಲ್ಲ. ಕಂಟೆಬೆಟ್ಟು ನಿವಾಸಿಗಳು ತಮ್ಮ ಪ್ರದೇಶಕ್ಕೆ ಹೋಗಬೇಕಾದ ದಾರಿಗಾಗಿ ಹೋರಾಟ ನಡೆಸಬೇಕಾಯಿತು. ಗುಡ್ಡ ಅಗೆಯುವ ಮುನ್ನವೇ ಆಕ್ಷೇಪಿಸಬೇಕಿತ್ತು ಎಂದು ಈಗ ಅನಿಸುತ್ತದೆ. ಈಗ ಅಲ್ಲಿ ವಕ್ಕರಿಸಿದವರು ತಮ್ಮದಲ್ಲದ ಜಾಗಕ್ಕೆ ವಿನಾಕಾರಣ ಹೋರಾಡುತ್ತಿದ್ದಾರೆ. ಈ ಸತ್ಯ ಗೊತ್ತಿದ್ದೂ ರಾಜಕೀಯದ ಜಿದ್ದಿಗೆ ಅವರಿಬ್ಬರನ್ನೂ ಬಲಿಕೊಟ್ಟು ದೂರದಲ್ಲಿ ಹಲವು ಮಂದಿ ನಗುತ್ತಿದ್ದಾರೆ. ಇದರ ಪರಿಣಾಮ ನಮ್ಮ ಕುಟುಂಬದ ಮೇಲಾಗಿದೆ. ಪರ್ವಾಗಿಲ್ಲ, ನಮ್ಮ ಕೇರಿಗೆ ಹೋಗಲು ದಾರಿ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಮುಂದೆ ಪ್ರಕರಣ ನ್ಯಾಯಾಲಯದಲ್ಲಿದೆ (ಈ ಪ್ರಕರಣ ಮತ್ತು ಊರಿನ ರಾಜಕೀಯದ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ). ಈಗ ಇದೇ ದಾರಿಯ ಲಾಭ ಪಡೆದು ನಮ್ಮ ಮನೆಯ ಸಮೀಪವೇ ಸಿಮೆಂಟ್ ಇಟ್ಟಿಗೆ ತಯಾರಿಕಾ ಘಟಕ ತಲೆಯೆತ್ತಿದೆ. ಅದರ ಆಸುಪಾಸಿನಲ್ಲಿದ್ದ ಹಾಡಿ ಸಂಪೂರ್ಣ ಬೋಳಾಗಿ ರಸ್ತೆ ಕಾಣುತ್ತಿದೆ. ಹಾಡಿ, ಕಾಡುಗಳು ನಾಗಸ್ಥಾನ, ಭೂತಸ್ಥಾನಕ್ಕಷ್ಟೇ ಸೀಮಿತವಾಗಿವೆ. ಮುಡಂಬು ಕುಂಜ, ಊರ ಮುಂಭಾಗ ನೀರಿನ ಟ್ಯಾಂಕ್ ಪ್ರದೇಶದ ಗುಡ್ಡ ಯಾವುದನ್ನೂ ಬಿಟ್ಟಿಲ್ಲ. ಎಲ್ಲವೂ ನಿವೇಶನ, ಆಶ್ರಯಮನೆಗಳಿಗೆ ಮೀಸಲಾಗಿಬಿಟ್ಟಿದೆ. ಕಡ್ತಲದ ಹಸಿರು ಇತಿಹಾಸದ ಪುಟ ಸೇರುತ್ತಿದೆ.
ಕ್ರಷರ್ ಸಮೀಪದ ಬಂಡೆಯಿಂದ ಸಿಡಿದ ಕಲ್ಲುಗಳು ಎಷ್ಟೋಬಾರಿ ಬೊಬ್ಬರ್ಯನನ್ನೂ ನಡುಗಿಸಿವೆ. ಆಸುಪಾಸಿನ ಮಂದಿಯ ಮೌನವೇದನೆ, ಕೃಷಿ ಭೂಮಿ ಸೇರಿದ ಕಲ್ಲುಪುಡಿ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ.
ಮ್ಮೂರ ಗಡಿ ಭಾಗದ ತೀರ್ಥೊಟ್ಟಿ ನದಿ ಸಂಪೂರ್ಣ ಬರಿದಾಗಿತ್ತು. ಅದಕ್ಕೂ ಮುನ್ನ ಮೀನುಬೇಟೆಗಾರರು ವಿಷವಿಕ್ಕಿದ ಪರಿಣಾಮ ಸಾವಿರಾರು ಮೀನುಗಳು ಸಾವನ್ನಪ್ಪಿದ್ದನ್ನು ಕಣ್ಣಾರೆ ನೋಡಿದ್ದೇನೆ. ನಮ್ಮ ಹೈಸ್ಕೂಲು– ಕಾಲೇಜು ದಿನಗಳಲ್ಲಿ ಜನವರಿ ಅಂತ್ಯದವರೆಗಾದರೂ ಬಹುತೇಕ ತುಂಬಿ ಹರಿಯುತ್ತಿದ್ದ ತೀರ್ಥೊಟ್ಟಿ ನದಿ ಈಗ ಅವಧಿಗೂ ಮುನ್ನವೇ ಬರಿದಾಗುತ್ತಿದೆ. ಇದಕ್ಕೆ ಹಲವರು ಪಂಪ್‌ಸೆಟ್ ಇಟ್ಟು ನೀರು ತೆಗೆದದ್ದೇ ಕಾರಣ ಎಂದು ವಾದಿಸಿದವರಿದ್ದಾರೆ. ಆದರೆ, ಪಂಪ್‌ಸೆಟ್‌ಗಳು ಅಂದೂ ಇದ್ದವು. ಇಂದೂ ಇವೆ. ಆದರೆ, ವ್ಯಾಪಕವಾದ ಮರಳುಗಾರಿಕೆ. ಪಕ್ಕದ ಊರಿನಲ್ಲಿರುವ ಬೃಹತ್ ಅಕ್ಕಿಗಿರಣಿ ಸಾಕಷ್ಟು ನೀರು ಹೀರಿ ತ್ಯಾಜ್ಯವನ್ನು ಹೊಳೆಗೆ ಬಿಡುತ್ತಿತ್ತು. ಸುಮಾರು ಅರ್ಧಭಾಗದಷ್ಟು ನೀರು ಕಂದು ಬಣ್ಣದಿಂದ ಕೂಡಿ ಹರಿಯುತ್ತಿತ್ತು. ನೀರು ಹಿಡಿದಿಡುತ್ತಿದ್ದ ಮರಳು ಇಲ್ಲವಾಗಿದೆ. ತೀರ್ಥೊಟ್ಟಿಯ ಹರಿವು ಪ್ರತಿವರ್ಷವೂ ಇಳಿಮುಖವಾಗುತ್ತಿದೆ.
ಗದ್ದೆಗಳಲ್ಲಿ ಓ ಬೇಲೆ ಧ್ವನಿ ಉಡುಗುತ್ತಿದೆ.
ಮುಂದೊಂದು ದಿನ ನಿಡ್ಡೋಡಿಯ ವಿದ್ಯುತ್ ಸ್ಥಾವರವೋ ರಾಸಾಯನಿಕ ಘಟಕವೋ ಕಡ್ತಲದಲ್ಲಿ ಸ್ಥಾಪನೆಯಾದರೆ ಖಂಡಿತ ಪಂಚಾಯಿತಿ, ಊರ ಗಣ್ಯರು, ಗುತ್ತಿನವರು, ಗುರಿಕಾರರು ಅನಿಸಿಕೊಂಡವರೇ ಮುಕ್ತವಾಗಿ ಊರನ್ನು ಮಾರುವುದು ಖಚಿತ. ಯಾಕೆಂದರೆ ನಿಡ್ಡೋಡಿ, ಉಡುಪಿಯಲ್ಲಾದಂತಹ ಹೋರಾಟಗಳು ನಮ್ಮೂರಿನಲ್ಲಿ ಆಗಲು ಅಸಾಧ್ಯ. ನನಗೆಷ್ಟು ಲಾಭ, ಅವನ ಕಾಲೆಳೆಯುವುದು ಹೇಗೆ ಎಂಬುದನ್ನೇ ನಾನು ಚಿಂತಿಸಬೇಕಾದರೆ. ಊರಿನ ಸಮಷ್ಟಿ ಹಿತದೃಷ್ಟಿ ನನಗೆ ಬೇಕೇ? ಇದು ನಮ್ಮ ಮನಸ್ಸು.
–ಇದ್ಯಾವುದೂ ಊರ ಗಣೇಶೋತ್ಸವದಲ್ಲಿ ‘ನಮ್ಮ ಊರು ಹಾಗಿತ್ತು, ಹೀಗಿತ್ತು’ ಎಂದು ಹಳೇ ಕ್ಯಾಸೆಟ್ ನುಡಿಸಿ ಜನರನ್ನು ಮಂಗ ಮಾಡುವ ಪ್ರೊಫೆಸರ್ ರಾಜಕಾರಣಿಗಳಿಗಾಗಲಿ, ಹಾಲಿ ಯುವಜನರಿಗಾಗಲಿ, ಪಂಚಾಯಿತಿಯಲ್ಲಿ ಪ್ರಾಮಾಣಿಕತೆ ಶಬ್ದದ ಅರ್ಥ ತಿಳಿಯದವರಿಗೆ, ಹೋಗಲಿ ಊರ ಮಂದಿಯನ್ನು ಸೇರಿಸುವ ಬೊಬ್ಬರ್ಯನ ತಾಣದ ಆಡಳಿತಕ್ಕಾಗಲಿ ಅರಿವಿಗೆ ಬರುತ್ತಿಲ್ಲ.
ಸ್ವಾಮಿ ಬೊಬ್ಬರ್ಯ...,
ಕಡ್ತಲ ಉಳಿದರೆ ನೀನುಂಟು. ನಿನ್ನ ಧರ್ಮ ಉಂಟು, ನಿನ್ನನ್ನು ನಂಬಿದವರಾದ ನಮಗೂ ಉಳಿವುಂಟು. ಮೊದಲು ಊರು ಉಳಿಸು. ಆ ಪ್ರಾಮಾಣಿಕ ಬುದ್ಧಿ ನಮಗೆ ಕೊಡು.
ಪ್ರೀತಿಯಿಂದ
–ಶರತ್ ಹೆಗ್ಡೆ, ಕಡ್ತಲ
ಕಡ್ತಲದ ಮಟ್ಟಿಗೆ ಅದೊಂದು ಸಕಾಲಿಕ, ಒಳ್ಳೆಯ ಹೋರಾಟವೇ. ದೇವಸ್ಥಾನ ಕಳೆದುಕೊಳ್ಳುವುದರಲ್ಲಿ ಕಡ್ತಲ ಗ್ರಾಮವೂ ಸೇರಿತ್ತು.
ಊರು, ಅದರ ಚರಿತ್ರೆ, ಆರಾಧ್ಯ ದೈವದ ಜತೆಗಿನ ಭಾವನಾತ್ಮಕ ಸಂಬಂಧದ ಅರಿವಿಲ್ಲದ, ಬುರುಡೆಯೊಳಗೆ ಕನಿಷ್ಠ ಬುದ್ದಿ ಎಂಬುದೊಂದು ಇಲ್ಲದ, ಊರಿನ ಇತಿಹಾಸ, ಪ್ರಮುಖ ಘಟನೆಗಳ ಬಗ್ಗೆ ಅರಿವಿಲ್ಲದ, ಅರಿಯಲು ಪ್ರಯತ್ನಪಡದ ಗ್ರಾಮಾಡಳಿತದ ಬುದ್ದಿರಹಿತ ಅಧಿಕಾರಿಗಳೆನಿಸಿಕೊಂಡಿರುವವರಿಂದ ಆದ ಪ್ರಮಾದವಿದು.
ಒಟ್ಟಾರೆ ಕಡ್ತಲದಲ್ಲಿ ದುರ್ಗಾಪರಮೇಶ್ವರಿ ಎಂಬ ದೇವಸ್ಥಾನ ಇದೆ. ನೀವು ನೆಲಸಮಗೊಳಿಸಬಹುದು ಎಂದು ಸರ್ಕಾರಕ್ಕೆ ಏಕಾಏಕಿ ವರದಿ ಕಳುಹಿಸಿಕೊಟ್ಟರು.
ಊರಿನ ಜನ ಎದ್ದುನಿಂತರು. ದೇವಸ್ಥಾನ ಉಳಿಸಲು ಪಣ ತೊಟ್ಟರು. ಜೀರ್ಣೋದ್ಧಾರಗೊಂಡು ಭಕ್ತರನ್ನು ಸೆಳೆಯುತ್ತಿದ್ದ ದೇವಸ್ಥಾನ ನೆಲಸಮಗೊಳಿಸುವುದರ ವಿರುದ್ಧ ಹಲವು ಸಭೆಗಳು ನಡೆದವು. ಗಣೇಶೋತ್ಸವದ ಸಾರ್ವಜನಿಕ ಸಭೆಯಲ್ಲೂ ಭಾಷಣ ಮೊಳಗಿತು. ಕೊನೆಗೆ ಕಾರ್ಕಳದಲ್ಲೊಂದು ಬೃಹತ್ ಪ್ರತಿಭಟನೆ ನಡೆಯಿತು. ಇದೇ ರೀತಿ ನೆಲಸಮಗೊಳ್ಳುವ ಆತಂಕವಿದ್ದ ಅನೇಕ ದೇವಸ್ಥಾನಗಳ ಮುಖ್ಯಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೊನೆಗೂ ದೇವಸ್ಥಾನದ ಮಹತ್ವ, ಅದರಿಂದ ಸಾರ್ವಜನಿಕ ಸಂಚಾರಕ್ಕೇನೂ ಅಡೆತಡೆ ಆಗದಿರುವುದು, ಅದರ ಅಧಿಕೃತತೆಯ ಬಗ್ಗೆ ಸರ್ಕಾರಕ್ಕೆ ಮನವರಿಕೆಯಾಯಿತು. ವಿವಾದ ಅಲ್ಲಿಗೇ ತಣ್ಣಗಾಗಿ ಕೊನೆಗೂ ಬೊಬ್ಬರ್ಯ ದುರ್ಗಾಪರಮೇಶ್ವರಿಯ ಪೂಜೆಯ ಗಂಟೆ ನಿರಾತಂಕವಾಗಿ ಡಣ ಢಣ ಸದ್ದು ಮಾಡಿತು.
ಈಗ ಊರು ಉಳಿಸಬೇಕಿದೆ...
ಹೌದು ಸ್ವಾಮಿ. ಅಂದು ದೇವಸ್ಥಾನ ಉಳಿಸಲು ನಡೆಸಿದ ಹೋರಾಟದ ರೀತಿಯಲ್ಲೇ ಕಡ್ತಲ ಊರು ಉಳಿಸಬೇಕಿದೆ. ಪಕ್ಕನೆ ನೋಡಿದರೆ ಅರಿವಿಗೆ ಬರಲಿಕ್ಕಿಲ್ಲ. ಕಡ್ತಲದ ನೆಲ–ಜಲ ಹಂತಹಂತವಾಗಿ ನಾಶವಾಗುತ್ತಿದೆ. ಯಾರಿಗೂ ಗೊತ್ತಿಲ್ಲದೇ...ಕೆಲವು ಮಜಲುಗಳನ್ನು ನೆನಪಿಸೋಣ
80ರ ಅಂತ್ಯ 90ರ ದಶಕದ ಆರಂಭದಲ್ಲಿ ಕಡ್ತಲದಲ್ಲಿ ಒಂದು ಗೇರುಬೀಜದ ಕಾರ್ಖಾನೆ ಆರಂಭವಾಯಿತು. ಸದ್ಯ ತಿರುಮಲ ಕ್ಯಾಶ್ಯೂ ಇಂಡಸ್ಟ್ರೀಸ್. ಈಗ ಕಡ್ತಲದಮಟ್ಟಿಗೆ ದೊಡ್ಡ ಉದ್ಯಮ. ಇದೇ ಉದ್ಯಮ ವಿಸ್ತರಣೆಯಾಗಿ ಮುಡಂಬು ಕುಂಜ (ಪರ್ವತ)ದ ತಪ್ಪಲಲ್ಲಿ, ರಾಜ್ಯದ ಬೇರೆ ಭಾಗಗಳಲ್ಲಿ ತನ್ನ ಘಟಕ ತೆರೆಯಿತು. ಸುಮಾರು 10 ವರ್ಷಗಳ ಕಾಲವೂ ಈ ಪರಿಸರಕ್ಕೆ ಬಂದರೆ ಗೇರು ಬೀಜದ ಸಿಪ್ಪೆಸುಟ್ಟ ಘಾಟು ಮೂಗಿಗೆ ಬಡಿಯುತ್ತಲೇ ಇತ್ತು. ಈಗ ಸ್ವಲ್ಪಮಟ್ಟಿಗೆ ನಿಯಂತ್ರಣದಲ್ಲಿದೆ. ಇದರ ಹಿಂದೆಯೇ ಬಂತು ಕ್ರಷರ್. ಬಹುಷಃ ಜಲ್ಲಿ ಹುಡಿಮಾಡುವ ಘಟಕ ನೋಡಿದ್ದೇ ಮೊದಲು. ನಾವೆಲ್ಲಾ ಆಗ ಹೈಸ್ಕೂಲು ಹುಡುಗರು. ವಾರಕ್ಕೊಮ್ಮೆಯಾದರೂ ಆ ಘಟಕದ ಸುತ್ತ ಓಡಾಡಿ ಬೃಹತ್ ಯಂತ್ರಗಳನ್ನು ಮುಟ್ಟಿ ನೋಡುವುದೇ ಸಾಧನೆ!. ಅದೇ ಘಟಕದ ಹಿಂದೆ ಹತ್ತಾರು ಎಕರೆಗಳಷ್ಟು ಪ್ರದೇಶದಲ್ಲಿ ವಿಶಾಲವಾಗಿ ಹರಡಿರುವ ಕರಿಯ ಬಂಡೆ. ಈಗ ಎಷ್ಟು ಉಳಿದಿದೆಯೋ ಗೊತ್ತಿಲ್ಲ. ಬಂಡೆಯ ಬುಡದಲ್ಲೇ ಕೃಷಿಭೂಮಿ. ಕಲ್ಲು ಗಣಿಗಾರಿಕೆಯಿಂದ ಅದೂ ಉಳಿದಿರುವುದು ಸಂಶಯವೇ.ಇದರ ಮಧ್ಯೆ ನಮ್ಮದೇ ಬಂಧುಗಳ ಮನೆಯ ಮೇಲ್ಭಾಗದ ಗುಡ್ಡದಲ್ಲಿ ಸೋಮನಾಥ ಕಲ್ಲು ಪತ್ತೆಯಾಯಿತು. ಬೃಹತ್ ಯಂತ್ರ, ಕಂಪ್ರೆಸರ್ ಬಳಸಿ ಲಘು ಸ್ಫೋಟಕ ಇಟ್ಟು ದೊಡ್ಡ ಸಾಬೂನು ಕೇಕ್ ರೀತಿಯಲ್ಲಿ ಬಂಡೆಗಳನ್ನು ಕತ್ತರಿಸಿ ತೆಗೆಯುತ್ತಿದ್ದರು. ಕೆಂಪನೆಯ ಬಹಳ ಅಪರೂಪದ ಕಲ್ಲು ಅದು. ಈ ‘ಘನಕಾರ್ಯ’ದಲ್ಲಿ ನಮ್ಮ ಕುಟುಂಬವೂ ಹಿಂದೆ ಬೀಳಲಿಲ್ಲ. ಮನೆಯ ಮುಂದಿನ ಬೆಟ್ಟದಲ್ಲಿ ಮತ್ತಷ್ಟು ಸೋಮನಾಥ ಕಲ್ಲು ಪತ್ತೆಯಾಯಿತು. ಆ ಬೆಟ್ಟಕ್ಕೂ ಮಂಗಳೂರು ಮೂಲದ ಗ್ರಾನೈಟ್ ಉದ್ಯಮಿಯೊಬ್ಬರು ಬಂದು ಲಗ್ಗೆಇಟ್ಟರು. ಕೆಲಕಾಲ ಅದೂ ನಡೆಯಿತು. ಹಣ ಹಂಚಿತಿನ್ನಲು ಹತ್ತಾರುಮಂದಿ ಹುಟ್ಟಿಕೊಂಡರು. ರಾತೋರಾತ್ರಿ ಬೃಹತ್ ಕಲ್ಲಿನ ಗಟ್ಟಿಗಳ ಸಾಗಣೆ ನಡೆಯಿತು. ಅದರ ಬಳಿಕ ಪಂಚಾಯಿತಿ ಹಿಂಭಾಗ (ಕೇರಾಫ್ ನಾರಾಯಣ ಪೂಜಾರಿ ಅವರ ಸೇಂದಿ ಅಂಗಡಿ ಬಳಿ) ಇದ್ದ ಗುಂಡುಕಲ್ಲುಗಳ ಮೇಲೂ ಕಲ್ಲು ತೆಗೆಯುವವರ ಕಣ್ಣು ಬಿತ್ತಾದರೂ ಕಾನೂನು ತೊಡಕಿನಿಂದ ಅದು ಸಾಧ್ಯವಾಗಲಿಲ್ಲ. ಇವೆಲ್ಲಕ್ಕೆ ಪರವಾನಿಗೆ ಇತ್ತೋ ಇಲ್ಲವೋ ದೇವರೇ ಬಲ್ಲ. ನಮ್ಮಂಥ ಸಣ್ಣ ಹುಡುಗರಿಗೆ ಅವೆಲ್ಲ ಅರ್ಥವಾಗುವಂಥದ್ದೂ ಆಗಿರಲಿಲ್ಲ. ಆದರೆ, ಸುಂದರ ಬೆಟ್ಟಗಳು ಆಕಾರ ಕಳೆದುಕೊಂಡವು. ಅರ್ಧಂಬರ್ಧ ಓದಿ ಊರಿನಲ್ಲೇ ಉಳಿದುಕೊಂಡವರು ‘ಟಿಂಬರು ಮರ್ಚಂಟು’ಗಳಾದರು, ಕಾಲೇಜಿನಿಂದ ವಾಶ್‌ಔಟ್ ಅನಿಸಿಕೊಂಡ ಧಡೂತಿಗಳು ಕಲ್ಲು ಉದ್ಯಮಿಗಳಾದರು. ಇನ್ನೂ ಉಳಿದದ್ದು ಭೂಮಿ. ಇದೇ ಸಂತಾನಕ್ಕೆ ಸೇರಿದ ಹಲವರು ‘ರಿಯಲ್ ಎಸ್ಟೇಟ್’ ಹೆಸರಿನಲ್ಲಿ ದಂಧೆ ಆರಂಭಿಸಿದರು.
ಹೀಗೆ ಕಡ್ತಲದ ಹಸಿರು ನಾಶವಾಗುತ್ತಲೇ ಇದೆ. ಜಲ ಬತ್ತುತ್ತಿದೆ. ಬಂಡೆ ಗುಡ್ಡಗಳು ಬೋಳಾಗುತ್ತಿವೆ.
ಐತಿಹಾಸಿಕ ಪಾಂಡವರ ಅಗಳು ನಾಶ
ಒಂದು ಐಡಿಯಾ ನಮ್ಮೂರಿನ ಯಾವನೋ ಮೇಧಾವಿಗೆ ಹೊಳೆಯಿತು. ಶಾಲೆಯ ಹಿಂಭಾಗ ಕೋಟೆಯ ರೀತಿ ಇದ್ದ ‘ಪಾಂಡವರ ಅಗಳು’ಹೆಸರಿನ ಉದ್ದವಾದ ಗುಡ್ಡ ಸ್ವರೂಪದ ಗೋಡೆ ಇತ್ತು. ಶಾಲೆಗೂ ಪಕ್ಕದಲ್ಲೇ ಇದ್ದ ಹಾಡಿಗೂ ಗಡಿಯ ರೂಪದಲ್ಲಿತ್ತು ಅದು. ಪಾಂಡವರು ಅಲ್ಲಿಗೆ ಬಂದಿದ್ದರು ಎಂಬ ಪ್ರತೀತಿಯೂ ಇದೆ. ಅದಕ್ಕಿಂತಲೂ ಅದರಲ್ಲಿದ್ದ ಜೀವವೈವಿಧ್ಯ ಯಾರಿಗೂ ಕಾಣಿಸಲಿಲ್ಲ. ಪರಿಸರ ಪಾಠ ಹೇಳಲು ಸೂಕ್ತವಾದ ತಾಣ ಎಂದೂ ಗೊತ್ತಾಗಲಿಲ್ಲ. ಶಾಲಾ ಮೈದಾನ ವಿಸ್ತರಣೆ ಹೆಸರಿನಲ್ಲಿ ಅಗಳಿಗೆ ಜೆಸಿಬಿ ಹಾಕಲಾಯಿತು. ಮೈದಾನವೇನೋ ದೊಡ್ಡದಾಯಿತು. ಆದರೆ, ಪರಿಸರದ ಮೇಲಾದ ಪರಿಣಾಮವನ್ನು ಯಾರೂ ಊಹಿಸಲಿಲ್ಲ.ಪರಿಣಾಮ ಹೀಗಿದೆ...
ಸುಮಾರು ಎರಡು ಕಿಲೋಮೀಟರ್ ಉದ್ದದ ಪಾಂಡವರ ಅಗಳಿನಲ್ಲಿ ಸುಮಾರು ನಾಲ್ಕು ಅಡಿ ಆಳದ ಕಂದಕ ಇತ್ತು. ಮಳೆ ಬಂದರೆ ಶಾಲಾ ಮೈದಾನ ಆಸುಪಾಸಿನ ನೀರೆಲ್ಲಾ ಸಂಗ್ರಹವಾಗಿ ಜಡ್ಡುಗದ್ದೆ ತಿರುವಿನ ಬಳಿಯ ತಗ್ಗು ಪ್ರದೇಶದಲ್ಲಿ ಸಂಗ್ರಹವಾಗಿ ಇಂಗುತ್ತಿತ್ತು. ಹಾಗೆ ಇಂಗಿ ಉಳಿದ ನೀರು ತೋಡುಗಳ ಮೂಲಕ ವ್ಯವಸ್ಥಿತವಾಗಿ ಗದ್ದೆಗಳಿಗೆ ಹರಿದುಹೋಗುತ್ತಿತ್ತು. ಅತ್ತ ರೈತರು ಅಗತ್ಯಕ್ಕೆ ತಕ್ಕಂತೆ ನೀರು ಬಿಡಿಸಿಕೊಳ್ಳುತ್ತಿದ್ದರು. ಊರಿನ ಬಾವಿಗಳಲ್ಲಿ ಯಥೇಚ್ಛ ಅಂತರ್ಜಲ ಇತ್ತು. ಊರಿನ ಮುಖ್ಯ ಭಾಗದಲ್ಲಿ ನೀರು ಕಡಿಮೆಯಾದರೂ ಊರಿಡೀ ಪೂರೈಸುವಷ್ಟು ನೀರು ಕಂಟೆಬೆಟ್ಟು, ಜಡ್ಡುಗದ್ದೆಯ ಬಾವಿಗಳಲ್ಲಿ ಇರುತ್ತಿತ್ತು. ಇತ್ತೀಚೆಗೆ ತೋಡಲಾದ ಬೋರ್‌ವೆಲ್‌ಗೂ ಸಾಕಷ್ಟು ಮರುಪೂರಣಗೊಳ್ಳುತ್ತಿತ್ತು. ಆದರೆ ಇದ್ಯಾವುದೂ ಕಡ್ತಲದ ಊರು ಉದ್ಧಾರ ಮಾಡುವವರಿಗೆ ತಿಳಿಯಲಿಲ್ಲ. ಪರಿಸರ ಭಾಷಣಗಳು ಶಾಲಾ ಕೊಠಡಿಗಷ್ಟೇ ಸೀಮಿತವಾಯಿತು. ಒಂದು ವೇಳೆ ಪಾಂಡವರ ಅಗಳನ್ನು ಹಾಗೆಯೇ ಬಿಟ್ಟು ಸೋಪಾನದ ರೀತಿ ಕತ್ತರಿಸಿ ಕಂದಕ್ಕೆ ಕಲ್ಲು ಚಪ್ಪಡಿ ಅಥವಾ ಸಿಮೆಂಟ್ ಹಲಗೆಯ ಮುಚ್ಚಿಗೆ ಮಾಡಿಬಿಡುತ್ತಿದ್ದರೆ ಕಡ್ತಲ ಶಾಲೆಗೆ ಕಾಂಪೌಂಡ್ ಕಮ್ ಸುಂದರ ಸ್ಟೇಡಿಯಂ ನೈಸರ್ಗಿಕವಾಗಿಯೇ ನಿರ್ಮಾಣಗೊಳ್ಳುತ್ತಿತ್ತು. ಜೀವ ವೈವಿಧ್ಯ, ನೀರು ಉಳಿಯುತ್ತಿತ್ತು. ಗಿಡಮರಗಳ ನೆರಳಿನಲ್ಲಿ ಹಾಯಾಗಿ ಮಕ್ಕಳು ಪಾಠ ಓದುತ್ತಿದ್ದರು. ಆಟ ನೋಡಬಹುದಿತ್ತು.| ಪಾಂಡವರ ಅಗಳು ನೆಲಸಮವಾಗಿ ಮೈದಾನ ವಿಸ್ತರಣೆಯಾದ ಸ್ಥಳ ಹೀಗಿದೆ |
ಕ್ರಷರ್ ಸಮೀಪದ ಬಂಡೆಯಿಂದ ಸಿಡಿದ ಕಲ್ಲುಗಳು ಎಷ್ಟೋಬಾರಿ ಬೊಬ್ಬರ್ಯನನ್ನೂ ನಡುಗಿಸಿವೆ. ಆಸುಪಾಸಿನ ಮಂದಿಯ ಮೌನವೇದನೆ, ಕೃಷಿ ಭೂಮಿ ಸೇರಿದ ಕಲ್ಲುಪುಡಿ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ.
ಬರಿದಾದ ತೀರ್ಥೊಟ್ಟಿ
2006ರಲ್ಲಿ ನ![]() |
| ತೀರ್ಥೊಟ್ಟಿ ಬರಿದಾಗಿರುವ ಬಗ್ಗೆ ಮೇ 15, 2006ರಲ್ಲಿ ಪ್ರಕಟವಾದ ಪತ್ರಿಕಾ ವರದಿ |
ಗದ್ದೆಗಳಲ್ಲಿ ಓ ಬೇಲೆ ಧ್ವನಿ ಉಡುಗುತ್ತಿದೆ.
ಮುಂದೆ...
ಮುಂದೊಂದು ದಿನ ನಿಡ್ಡೋಡಿಯ ವಿದ್ಯುತ್ ಸ್ಥಾವರವೋ ರಾಸಾಯನಿಕ ಘಟಕವೋ ಕಡ್ತಲದಲ್ಲಿ ಸ್ಥಾಪನೆಯಾದರೆ ಖಂಡಿತ ಪಂಚಾಯಿತಿ, ಊರ ಗಣ್ಯರು, ಗುತ್ತಿನವರು, ಗುರಿಕಾರರು ಅನಿಸಿಕೊಂಡವರೇ ಮುಕ್ತವಾಗಿ ಊರನ್ನು ಮಾರುವುದು ಖಚಿತ. ಯಾಕೆಂದರೆ ನಿಡ್ಡೋಡಿ, ಉಡುಪಿಯಲ್ಲಾದಂತಹ ಹೋರಾಟಗಳು ನಮ್ಮೂರಿನಲ್ಲಿ ಆಗಲು ಅಸಾಧ್ಯ. ನನಗೆಷ್ಟು ಲಾಭ, ಅವನ ಕಾಲೆಳೆಯುವುದು ಹೇಗೆ ಎಂಬುದನ್ನೇ ನಾನು ಚಿಂತಿಸಬೇಕಾದರೆ. ಊರಿನ ಸಮಷ್ಟಿ ಹಿತದೃಷ್ಟಿ ನನಗೆ ಬೇಕೇ? ಇದು ನಮ್ಮ ಮನಸ್ಸು.–ಇದ್ಯಾವುದೂ ಊರ ಗಣೇಶೋತ್ಸವದಲ್ಲಿ ‘ನಮ್ಮ ಊರು ಹಾಗಿತ್ತು, ಹೀಗಿತ್ತು’ ಎಂದು ಹಳೇ ಕ್ಯಾಸೆಟ್ ನುಡಿಸಿ ಜನರನ್ನು ಮಂಗ ಮಾಡುವ ಪ್ರೊಫೆಸರ್ ರಾಜಕಾರಣಿಗಳಿಗಾಗಲಿ, ಹಾಲಿ ಯುವಜನರಿಗಾಗಲಿ, ಪಂಚಾಯಿತಿಯಲ್ಲಿ ಪ್ರಾಮಾಣಿಕತೆ ಶಬ್ದದ ಅರ್ಥ ತಿಳಿಯದವರಿಗೆ, ಹೋಗಲಿ ಊರ ಮಂದಿಯನ್ನು ಸೇರಿಸುವ ಬೊಬ್ಬರ್ಯನ ತಾಣದ ಆಡಳಿತಕ್ಕಾಗಲಿ ಅರಿವಿಗೆ ಬರುತ್ತಿಲ್ಲ.
ಸ್ವಾಮಿ ಬೊಬ್ಬರ್ಯ...,
ಕಡ್ತಲ ಉಳಿದರೆ ನೀನುಂಟು. ನಿನ್ನ ಧರ್ಮ ಉಂಟು, ನಿನ್ನನ್ನು ನಂಬಿದವರಾದ ನಮಗೂ ಉಳಿವುಂಟು. ಮೊದಲು ಊರು ಉಳಿಸು. ಆ ಪ್ರಾಮಾಣಿಕ ಬುದ್ಧಿ ನಮಗೆ ಕೊಡು.
ಪ್ರೀತಿಯಿಂದ
–ಶರತ್ ಹೆಗ್ಡೆ, ಕಡ್ತಲ

I remember recent Rubber plantations had deforested many of Natural beaties, wild Lifes, a recent trend, telling this bcz am a very much a nature Lover.
ReplyDeleteI Often Remember many of My school days....that somanatha kallu which was on the way to my home.I never knw that is Pandavara agalu which was behind our school...we often got beaten by our school teacher for playing, catching fish there...and many more.
yes Adarsh
ReplyDelete