ದೇವರುಗಳಲ್ಲಿ ಅತ್ಯಂತ ಶೋಷಣೆಗೊಳಗಾದವರೆಂದರೆ ಗಣೇಶ ಮತ್ತು ಶಬರಿಮಲೆ ಅಯ್ಯಪ್ಪ. ಹಾ ಮುಸ್ಲಿಮರಲ್ಲಿ ಅಲ್ಲಾಹನೂ... ಹೀಗೆಯೇ ಇದ್ದಾನೆ.
ಹಬ್ಬವನ್ನು ಒಂದು ದಶಕದ ಹಿಂದೆ ಈಗಿನಂತೆ ಕಲ್ಪಿಸಿಕೊಳ್ಳುವಂತೆಯೂ ಇರಲಿಲ್ಲ.
ಗಣೇಶನ ವಿಚಾರಕ್ಕೆ ಬರೋಣ. ಹಬ್ಬವೆಂದರೆ ಒಂದು ದಿನ ಇರಬೇಕು. ಮತ್ತೂ ಮುಂದುವರಿದರೆ ಅದರ ತಾಜಾತನ, ಉತ್ಸಾಹ ಕೆಡುತ್ತದೆ. ಆದರೆ ಶಿವಮೊಗ್ಗದಿಂದ ಮುಂದೆ ಬನ್ನಿ ಬಯಲು ಸೀಮೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಗಣೇಶನನ್ನು ನಿಜವಾಗಿಯೂ ಭಕ್ತರೇ ಹೀನಾಯವಾಗಿ ಶೋಷಿಸುತ್ತಾರೆ. ಮಧ್ಯಾಹ್ನ ಕಳೆದರೂ ಅವನನ್ನು ನಿರ್ಮಾಣ ಸ್ಥಳದಿಂದ ಪ್ರತಿಷ್ಠಾಪನಾ ಸ್ಥಳದವರೆಗೆ ಒಯ್ಯುವ ಕಾರ್ಯಕ್ರಮ. ಅದಕ್ಕೋ ಕೆಟ್ಟ ಕೊಳಕು ಕರ್ಕಶ, ಅಶ್ಲೀಲ ಸಾಹಿತ್ಯದ ಸಂಗೀತ. ಅದೆಲ್ಲಿದ್ದವೋ ಡಿಜೆಗಳೆಂಬ ದೈತ್ಯಗಳು. ದಾವಣಗೆರೆಯಲ್ಲಿ ಒಂದೆರಡು ಕಡೆ ಬಿಟ್ಟರೆ ಉಳಿದಂತೆ ಅನುಸರಿಸುವುದು ಪಕ್ಕಾ ಅನಾಗರಿಕ ಪದ್ಧತಿ. ಅವರಿಗೆ ಗಣೇಶೋತ್ಸವಕ್ಕೂ ಮಾರಿಹಬ್ಬಕ್ಕೂ ವ್ಯತ್ಯಾಸವೇ ಗೊತ್ತಿಲ್ಲ. ವಿಸರ್ಜನಾ ಮೆರವಣಿಗೆಯೋ ಅದಿನ್ನೂ ಶೋಚನೀಯ. ವಿಗ್ರಹದಲ್ಲಿ ಪ್ರಾಣ ಪ್ರತಿಷ್ಠಾಪನೆಗೊಂಡಿದ್ದರೆ(!) ಡಿಜೆ ಅಬ್ಬರಕ್ಕೆ ಹೃದಯಾಘಾತವಾಗಲೇಬೇಕು. ಸೂಕ್ಷ್ಮ ಪ್ರದೇಶಗಳಲ್ಲಂತೂ ಬೇಕೆಂತಲೇ ಸಂಗೀತದ ಅಬ್ಬರ ಏರುತ್ತದೆ.
ಇಂಥ ಡಿಜೆ ಪಿಶಾಚಿ ನಮ್ಮೂರಿನ ಗಣೇಶನಿಗೂ ಆವರಿಸಿದೆ ಎಂದು ಬೇಸರದಿಂದಲೇ ಹೇಳುತ್ತೇನೆ. ಸಾತ್ವಿಕನಾಗಿದ್ದ ನಮ್ಮೂರ ಗಣೇಶ ನಮ್ಮೂರಿನ ಕೆಲವು ದೆವ್ವ ಪಿಶಾಚಿಗಳಂತೇ ಇಂಥ ಕರ್ಕಶತೆಗೆ ಒಗ್ಗಿಕೊಂಡಿದ್ದಾನೆ.
ನಿಜವಾಗಿಯೂ ಗಣೇಶನ ಭಕ್ತರು, ಅಥವಾ ಆರಾಧನಾ ಪದ್ಧತಿ ಅದರ ಹಿನ್ನೆಲೆ ಗೊತ್ತಿದ್ದವರು ಮಾಡುವ ಕ್ರಮ ಇದಲ್ಲ.
ಒಂದು ನಂಬಿಕೆಯಿತ್ತು. ಗಣೇಶನ ಆರಾಧನೆಯಲ್ಲಿ ಕೊಂಚ ವ್ಯತ್ಯಯವಾದರೂ ಗಣೇಶ ಮುನಿಸಿಕೊಳ್ಳುತ್ತಾನೆ. ಊರಿಗೆ ಕೆಡುಕಾಗುತ್ತದೆ ಎಂದು ನಂಬಿದ ಮಂದಿ ಆದಷ್ಟು ಮಡಿವಂತಿಕೆ ಕಾಯ್ದುಕೊಳ್ಳುತ್ತಿದ್ದರು. ಗಣೇಶ ಬೆಳಿಗ್ಗೆ 8ರ ಒಳಗೆ ಆಗಮಿಸುತ್ತಿದ್ದ. (ಕರಾವಳಿ ಭಾಗದಲ್ಲಿ ಈಗಲೂ ಹಾಗೇ ಇದೆ.) ಆರಾಧಿಸುವವರಂತೂ ಪಕ್ಕಾ ಶಾಸ್ತ್ರ ತಿಳಿದವರೇ ಆಗಿರಬೇಕು. ಪ್ರಾರ್ಥನೆ ಇಡೀ ಊರಿಗೆ ಸಂಬಂಧಿಸಿದ್ದಾಗಿತ್ತು. ಗಣೇಶನನ್ನು ನೀರಿಗೆ ಬಿಡುವವರೆಗೂ ಸಣ್ಣ ಸಣ್ಣ ಅಂಶಗಳಿಗೂ ಗಮನ ಕೊಡಲಾಗುತ್ತಿತ್ತು.
ಆದರೆ....
ಈ ಭಾಗಗಳಲ್ಲಿ ಗಣೇಶನನ್ನು ಚರಂಡಿ, ಕೊಳಕಿನ ಮಧ್ಯೆ ಕೂರಿಸುತ್ತಾರೆ. ಬಲವಂತವಾಗಿ ಚಂದಾ ವಸೂಲಿ ಮಾಡುತ್ತಾರೆ. ಬರೀ ಕುಣಿದಲ್ಲ, ಕುಡಿದು ಕುಪ್ಪಳಿಸುತ್ತಾರೆ. ಕರ್ಕಶ ಡಿಜೆ ಸಂಗೀತ ಗಣೇಶನನ್ನು ವಿಸರ್ಜನೆಗೆ ಮೊದಲೇ ಅಟ್ಟಿಬಿಡುತ್ತದೆ. ಜನಪದ ಸಂಗೀತ ಮರೆಗೆ ಸರಿದಿದೆ. ಊರಿಗೊಬ್ಬನೇ ಇದ್ದ ಗಣೇಶ ಮಾರಿಗೊಂದರಂತೆ ಇದ್ದಾನೆ. ಅವರಿಗಿಂತ ನಮ್ಮ ಗಣೇಶ ದೊಡ್ಡವ, ಅವರಿಗಿಂತ ನಮ್ಮ ಸೌಂಡ್ ಬಾಕ್ಸ್ ದೊಡ್ಡದು, ಇಂಥದ್ದೇ ಕ್ಷುಲ್ಲಕ ವಿಷಯಗಳೇ ಪ್ರತಿಷ್ಠೆ ಎನಿಸುತ್ತಿವೆ.
ಬಾಲಗಂಗಾಧರ ತಿಲಕರು ಯಾವ ಉದ್ದೇಶವಿಟ್ಟು ಈ ಹಬ್ಬ ಜಾರಿಗೆ ತಂದಿದ್ದರೋ ಅದೆಲ್ಲವನ್ನೂ ಮರೆತಿದ್ದೇವೆ. ಗಣೇಶ ನಮ್ಮನ್ನು ಕ್ಷಮಿಸು. ನಾವು ನಿನ್ನ ಭಕ್ತರಲ್ಲ. ನಮ್ಮ ಮೈಕ್ ಸೆಟ್, ಕುಡಿತ, ಕುಣಿತ ನಮಗೆ ಮುಖ್ಯ. ಅದಕ್ಕೆ ನೀನು ನೆಪ ಅಷ್ಟೆ.
ಇನ್ನು ಶಬರಿಮಲೆ ಅಯ್ಯಪ್ಪನದ್ದೂ ಇದೇ ಪಾಡು. ಸಮಾಧಾನಕರ ಸಂಗತಿ ಎಂದರೆ ಇಲ್ಲಿಗೆ ಡಿಜೆ ಸಂಗೀತ ಬಂದಿಲ್ಲ. ಕನ್ನಡ, ಹಿಂದಿ ಚಿತ್ರಗೀತೆಗಳ ಭಟ್ಟಿ ಇಳಿಸಿದ ರಾಗಗಳ ಭಕ್ತಿಗೀತೆ(!)ಯಿದೆ. ಇಲ್ಲಿಯೂ ವ್ಯಕ್ತಿಯೊಬ್ಬನ ಮನಃಪರಿವರ್ತನೆ, ಕಷ್ಟಗಳ ಅರಿವು, ಸರಳ ಜೀವನದ ಆದರ್ಶಗಳನ್ನು ಅನುಸರಿಸುವುದು ಮುಖ್ಯಗುರಿ. ಆದರೆ ಇಲ್ಲಿ ಅಯ್ಯಪ್ಪನ ಭಕ್ತರೂ ಮೊದಲು ಮೈಕ್ ಭಕ್ತರು. ಬೆಳಗಿನ ಜಾವ, ಸಂಜೆ ಮೌನವಾಗಿ ಅಯ್ಯಪ್ಪನನ್ನು ಆರಾಧಿಸಬಹುದು. ಆದರೆ, ಊರೆಲ್ಲಾ ಕರ್ಕಶ ಸೃಷ್ಟಿಸಲು ಮೈಕ್ ಚಾಲನೆ ಮಾಡಲೇಬೇಕು. ಇಲ್ಲವಾದರೆ ಅಯ್ಯಪ್ಪನಿಗೆ ಎಚ್ಚರವಾಗುವುದೇ ಇಲ್ಲ. ಇನ್ನು ಇಂಥ ಶಿಬಿರಗಳು ಮಾರು ದೂರಕ್ಕೊಂದು ಇರುತ್ತವೆ. ಹತ್ತಾರು ಮೈಕ್‍ಗಳ ಧ್ವನಿ ಏಕಕಾಲಕ್ಕೆ ಅರಚಿದಾಗ. ನಮ್ಮಂತೆ ಅತ್ತ ಹಗಲೂ ಅಲ್ಲದ ಇತ್ತ ರಾತ್ರಿಯೂ ಅಲ್ಲದ ಕೆಲಸಗಳಲ್ಲಿ ತೊಡಗಿ ಒಂದಿಷ್ಟು ಕಣ್ಣು ಮುಚ್ಚಿ ನಿದ್ದೆ ನಿರೀಕ್ಷಿಸುವವರ, ತೊಟ್ಟಿಲಲ್ಲಿ ಮಲಗಿರುವ ಪುಟ್ಟ ಕಂದಮ್ಮಗಳ, ಹಿರಿಯರ ಗತಿ, ಮಾನಸಿಕ ಸ್ಥಿತಿ ಏನಾಗಿರಬೇಡ? ಎಷ್ಟೋ ಬಾರಿ ಇಂಥ ಮೈಕಪ್ಪ ಭಕ್ತರಿಗೆ ಕೆಟ್ಟ ಭಾಷೆಯಲ್ಲಿ ಶಾಪ ಹಾಕಿದ್ದಿದೆ.
ಇನ್ನು ಅಲ್ಲಾಹನೋ... ಅವನದ್ದಂತೂ ವರ್ಷಪೂರ್ತಿ ಇದೇ ಗೋಳು. ಇದಕ್ಕೊಂದು ನಿಯಂತ್ರಣ ವ್ಯವಸ್ಥೆಯೇ ಇಲ್ಲ. ದಿನಕ್ಕೆ ಐದಾರು ಬಾರಿ ಆಜಾನ್ ಕೂಗಲೇಬೇಕು. ಸಂಜೆ, ರಾತ್ರಿ, ಒಮ್ಮೊಮ್ಮೆ ತಡರಾತ್ರಿ, ಬೆಳಗಿನ ಜಾವ... ಹೀಗೆ ಕೂಗು ಮೊಳಗುವುದಕ್ಕೆ ಹೊತ್ತುಗೊತ್ತು ಒಂದೂ ಇಲ್ಲ. ಒಂದು ಆಜಾನ್ ಮೊಳಗಿದರೆ ಸಾಕು ಊರಿನಲ್ಲಿದ್ದ ಎಲ್ಲ ಮೈಕ್‍ಗಳಿಗೂ ಎಚ್ಚರವಾಗಿಬಿಡುತ್ತದೆ. ನಿಯಮಗಳಂತೂ ಇಲ್ಲಿ ಅನ್ವಯಿಸುವುದಿಲ್ಲ.
ಪ್ರಾಮಾಣಿಕ, ದಿನಕ್ಕೈದು ಬಾರಿ ನಮಾಜ್ ಮಾಡುವ ಅಲ್ಲಾಹನ ಭಕ್ತನಿಗೆ ಈ ಕೂಗು ಬೇಕಾಗಿಯೇ ಇಲ್ಲ. ಆತ ಎಲ್ಲಿದ್ದರೂ ಅವನಿಗೆ ನಮಸ್ಕರಿಸುತ್ತಾನೆ.
ಈ ಮೇಲಿನ ಮೂರೂ ಉದಾಹರಣೆಗಳಲ್ಲಿ ನಮಗೆ ಧರ್ಮಕ್ಕಿಂತ ನಮ್ಮ ಧ್ವನಿ, ಪ್ರತಿಷ್ಠೆಯದೇ ಮೇಲುಗೈ ಆಗಬೇಕೆಂಬ ಹುಚ್ಚು ಉತ್ಸಾಹ.
ಊರೆಲ್ಲಾ ಅರಚಿ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಶರಣು ಕರೆದ ಅಯ್ಯಪ್ಪ ಭಕ್ತರು ಪರಿವರ್ತನೆ ಹೊಂದಿದ ಮಂದಿ ಎಲ್ಲೋ ಮೂಲೆಯಲ್ಲಿ ಸಿಕ್ಕಾರು. ಗಣೇಶನನ್ನು ಗದ್ದಲದಲ್ಲಿ ಒಯ್ದು, ಚರಂಡಿ ಪಕ್ಕ ಕೂರಿಸಿದವರ ಜೀವನಮಟ್ಟ ಇನ್ನೂ ಹಾಗೇ ಇದೆ. ಅಲ್ಲಾ... ಎಂದು ಆಜಾನ್ ಕೂಗುವ ಮಸೀದಿಯ ಪಕ್ಕದಲ್ಲೇ ಮರುದಿನದ ತುತ್ತಿಗಾಗಿ ಚಿಂತಿಸುವ, ಆತಂಕದ ನಾಳೆ ನೋಡುತ್ತಿರುವ ಬಡಪಾಯಿ ಮುಸ್ಲಿಂ ಕಾಣಸಿಗುತ್ತಾನೆ.
ಪರಸ್ಪರ ಧರ್ಮದ ಜಿದ್ದಿನಿಂದ ಇತ್ತೀಚೆಗೆ ಉರೂಸ್, ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಊರು ತುಂಬಾ ಮೈಕ್ ಕಟ್ಟಿ ಅಹೋರಾತ್ರಿ ಗದ್ದಲ ಎಬ್ಬಿಸುವ ಶಕ್ತಿಗಳೂ ಹೆಚ್ಚಾಗಿವೆ. ಸೀಮಿತ ಸಮುದಾಯ ಅಥವಾ ಗುಂಪಿಗೆ ತಲುಪಬೇಕಾದ ಸಂದೇಶ ಕೇವಲ ಪ್ರತಿಷ್ಠೆಯ ಕಾರಣಕ್ಕೆ ಊರೆಲ್ಲಾ ಗರ್ಜಿಸುತ್ತಿದೆ.
ಎರಡೂ ಧರ್ಮದವರು ಸ್ವಲ್ಪ ಕ್ರೈಸ್ತರ ಆರಾಧನಾ ಕ್ರಮದತ್ತ ನೋಡಿ. ಅವರ ಯಾವುದೇ ಪ್ರಾರ್ಥನೆ, ಸಂಗೀತದ ಧ್ವನಿ ಅವರ ಚರ್ಚ್, ಮನೆ ಅಥವಾ ಆರಾಧನಾ ಸ್ಥಳದಿಂದ ಆಚೆ ಕೇಳಿಸುವುದಿಲ್ಲ. ಆದರೆ, ದೇವರು ಕೇಳಿಸಿಕೊಂಡರೆ ಸಾಕು ಎಂಬುದು ಅವರ ನಂಬಿಕೆ. ನಮ್ಮಲ್ಲೂ ಬರಬಾರದೇ?