ದೊಪ್ ಎಂದು ಯಾವುದೋ ರಾಶಿಯ ಮೇಲೆ ಬಿದ್ದದ್ದೊಂದೇ ಗೊತ್ತು. ಆ ಮಗು ಒಂದೇ ಸಮನೆ ಅಳತೊಡಗಿತು. ಅತ್ತು ಸುಸ್ತಾಗಿ ಕೊನೆಗೆ ತಾನು ಬಿದ್ದ ಜಾಗವನ್ನೊಮ್ಮೆ ಸವರಿ ನೋಡಿತು. ನಯವಾದದ್ದು. ಬೀಸುವ ಗಾಳಿಗೆ ಪಟಪಟನೆ ಆ ರಾಶಿ ಸದ್ದಾಗುತ್ತಿದೆ. ತಾನು ಬಿದ್ದಿರುವುದು ಬೃಹತ್ ಪೇಪರ್ ರಾಶಿಯ ಮೇಲೆ. ಅದೂ

ರದ್ದಿ. ಆಗಲಿ, ಅದ್ಯಾರೋ ಎಸೆದ ನನ್ನ ದೇಹದ ಪಾರ್ಟ್‌ಗಳು ಚದುರದಂತೆ ರಕ್ಷಿಸಿತಲ್ಲಾ ಇದೇ ಪತ್ರಿಕೆಯ ರಾಶಿ. ಸುಸ್ತಿನಲ್ಲೂ ಒಂದು ನಿಟ್ಟುಸಿರು ಹೊರಟಿತು ಆ ಮಗುವಿನ `ಭಯಂಕರ' ಸೂಕ್ಷ್ಮ ನಾಸಿಕದಿಂದ.
ಅರೇ ಏ ದೇಖ್ ಭೈಯಾ. ಪೇಪರ್ ಬಂಡಲ್ ಮೇ ಬಚ್ಚಾ ಹೈ. ಅಬ್ ಹೀ ಪೈದಾ ಹುವಾ ಹೈ. ಕೇಳಿತೊಂದು ಆರ್ದ್ರ ಹೃದಯದ ಧ್ವನಿ. ರದ್ದಿ ಪೇಪರ್ ಆಯುವ ಹುಡುಗರ ಕೈಗೆ ಮಗು ಸಿಕ್ಕಿತು.
*** *** *** *** ***
ಪತ್ರಿಕೆ ರಾಶಿ ಮಧ್ಯೆ ನವಜಾತ ಶಿಶು ಪತ್ತೆ. ಹೆಚ್ಚುಕಡಿಮೆ ಎಲ್ಲಾ ಪತ್ರಿಕೆ, ಟಿವಿ ಚಾನೆಲ್‌ಗಳಲ್ಲಿ ಸುದ್ದಿ ಪ್ರಕಟವಾದವು. ಕೆಲವಂತೂ ಕೋಳಿಗಳ ಥರ ಜನ್ಮ ಮೂಲ ಕೆದಕಲುತೊಡಗಿದವು.
*** *** *** *** ***
ಮಗು ಅದೇ ಹುಡುಗರ ಕೊಳೆಗೇರಿಯಲ್ಲಿ ಬೆಳೆಯಿತು. ಸರ್ವ ಜನಾಂಗದ ಶಾಂತಿಯ ತೋಟದ ವಿಶ್ವಮಾನವನಾಗಿ.
ಸುಟ್ಟೂರು ಸಮೀಪ ಭಾರೀ ಗಾತ್ರದ ಪೇಪರ್ ರಾಶಿಯ ನಡುವೆ ಸಿಕ್ಕ ಮಗುವಿಗೆ ಸುಬ್ರಾಯ ಎಂದು ಹೆಸರಿಸಲಾಯಿತು. ಊರು ಗೊತ್ತಿಲ್ಲ. ಕೇರಿ ಇಲ್ಲ.
ಆತ ಸುಬ್ರಾಯ ಸಬ್ ಎಡಿಟರ್ ಸುಬ್ರಾಯ. ಯಮನಿಂದ ವರಸಹಿತ ಶಾಪ ಪಡೆದು, ಪತ್ರಿಕಾ ರಾಶಿಯ ಮೇಲೆ ಪುನರ್ಜನ್ಮ ಪಡೆದ, ಹುಟ್ಟುತ್ತಲೇ ಎಲ್ಲಾ ಮಾಧ್ಯಮಗಳಲ್ಲೂ ಸುದ್ದಿಯಾಗಿಯೇ ಕಾಣಿಸಿಕೊಂಡ ಸುಬ್ರಾಯ.
ಬಾಲ್ಯದಲ್ಲಿ ಅಷ್ಟಿಷ್ಟು ಓದುವ ಗೀಳು. ಚಂದಮಾಮನಿಂದ ಹಿಡಿದು, ರತಿ ವಿಜ್ಞಾನದವರೆಗೆ. ಎಲ್ಲಕ್ಕಿಂತ ಮಿಗಿಲಾಗಿ ಆತ ಪಡೆದದ್ದು ಲೋಕಾನುಭವ ಶಿಕ್ಷಣ. ಅವರಿವರ ಮನೆಯಲ್ಲಿ ಬೆಳೆಯುವಾಗ, ಅವರ ಮನೆ ಕಥೆ ಇವರಿಗೆ, ಇವರದ್ದು ಅವರಿಗೆ ಹೇಳುವ, ಮೂಲಕ ಎಲ್ಲರ ಮನೆ ದೋಸೆಯೂ ತೂತೇ ಎಂಬುದನ್ನು ಇಡೀ ಕೇರಿಗೆ ತೋರಿಸಿಬಿಟ್ಟ. ಒಂದು ವಿಷಯವನ್ನು ಯಥಾವತ್ತಾಗಿ ಇನ್ನೊಬ್ಬರಿಗೆ ಹೇಳುವ ಕಲೆ ಅವನಿಗೆ ಕರಗತವಾಗಿತ್ತು. ಅವನೇ ಆ ಕೇರಿಯಲ್ಲೊಂದು ಪ್ರಭಾವೀ ನ್ಯೂಸ್ ಚಾನೆಲ್ ಆಗಿ ಬೆಳೆದಿದ್ದ. ಸ್ವಲ್ಪಕಾಲ ಕಾಲೇಜು ಸೇರಿ ಅಲ್ಲಿಯೂ ಕಾಲಹರಣ ಮಾಡಿದ. ಅಲ್ಲಿ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ.
ಒಂದು ಜಾತಿಯಿಲ್ಲ, ಕತೆಯಿಲ್ಲ. ಮೇಲೂ ಅಲ್ಲ, ಕೆಳಗೂ ಅಲ್ಲ. ಒಂದು `ಬೆಲ್ಟ್' ಅಂತಂದ್ರೇನು ಗೊತ್ತಿಲ್ಲ. ಜಾತಿಯಿಲ್ಲದವನಿಗೆ ಈ ದೇಶದಲ್ಲಿ ಉದ್ಯೋಗ ಬಿಡಿ. ರೈಲ್ವೆ ರಿಸರ್ವೇಷನ್ ಕೂಡಾ ಸಿಗುವುದಿಲ್ಲ. ಅಂಥವನಿಗೆ ಯಾರು ಕೆಲಸ ಕೊಡ್ತಾರೆ. ಸುಬ್ರಾಯ ಕೆಲಸಕ್ಕೆ ಅಲೆದಲೆದು ಸುಸ್ತಾದ.
ಆದರೇನಂತೆ ಯಮ ಶಾಪ ಸುಳ್ಳಾಗುವುದೇ? ಅದ್ಯಾವುದೋ ಅನಿವಾರ್ಯತೆಯ ಬಿರುಗಾಳಿ ಆತನನ್ನು ಪತ್ರಿಕಾ ಕಚೇರಿಯೊಳಗೇ ತಂದುಹಾಕಿತು.
ಹುಟ್ಟಿದಾಗ ಅದ್ಯಾರೋ ಎಸೆದ ತನ್ನ ದೇಹಕ್ಕೆ ಒಂದಿನಿತೂ ನೋವಾಗದಂತೆ ರಕ್ಷಿಸಿದ್ದು ಪತ್ರಿಕೆ ರಾಶಿಯೇ ಅಲ್ಲವೇ. ಹಾಗಾದರೆ ಬದುಕು ಕೊಡಬೇಕಾದದ್ದೂ ಅದೇ. ಇದೇ ನನ್ನ ಕರ್ಮಭೂಮಿ ಅಂದುಕೊಂಡು ಸಮಾಧಾನ ತಂದುಕೊಂಡ ಸುಬ್ರಾಯ.
*** *** *** *** *** *** *** ***
ಎಂದಿನಂತೆ ವಿಕ್ರಮನ ಹೆಗಲಿನಿಂದ ತಪ್ಪಿಸಿಕೊಂಡ ಬೇತಾಳವು ಅಭ್ಯಾಸಬಲದಿಂದ ಪಿ.ಬಿ. ರಸ್ತೆಯ ರಾಜಭವನ ಬಾರಿನೊಳಗೆ ನುಗ್ಗಿತು. ಅವರಿವರು ಕುಡಿದು ಗ್ಲಾಸಿನ ತಳದಲ್ಲಿ ಉಳಿಸಿದ್ದ ಕೆಲವು ಹನಿಗಳನ್ನು ನೆಕ್ಕಿ ನೆಕ್ಕಿ `ಟೈಟ್' ಆಗತೊಡಗಿತು. ನೆಕ್ಕಿದ್ದೇ ಪಂಚಾಮೃತ ಎಂದು ಭಾವಿಸಿದ ಪ್ರೇತಕ್ಕೆ ಎಲ್ಲಾ ಬ್ರಾಂಡ್‌ಗಳೂ ಡ್ರೈ ಆಗಿಯೇ ಮಿಕ್ಸ್ ಆಗಿದ್ದರಿಂದ ಕಾಕ್‌ಟೇಲ್ ಕುಡಿದ ಅನುಭವವಾಗತೊಡಗಿತು. ಬಾರಿನ ಹುಡುಗರು ಹಾಕಿದ ಸಾಂಬ್ರಾಣಿ ಹೊಗೆಯ ಘಾಟು ತಾಳಲಾರದೇ ಅಲ್ಲಿಂದ ತೂರಾಡುತ್ತಾ ಹೊರಬೀಳಲೇಬೇಕಾಯಿತು.
*** *** *** *** *** ***
ಸರಿಸುಮಾರು ಮಧ್ಯರಾತ್ರಿ. ಬೈಕೊಂದು ನಿಧಾನವಾಗಿ ಆ ರಸ್ತೆಯಲ್ಲಿ ಬಂತು. ಪಿ.ಬಿ. ರಸ್ತೆಯ ಹೊಂಡಗಳೆಂಬೋ ಸ್ಪೀಡ್‌ಬ್ರೇಕರ್ ಮಧ್ಯೆ ಗಜಕ್ಕನೆ ಸಿಕ್ಕಿಹಾಕಿಕೊಂಡ ವಾಹನ ಜಪ್ಪಯ್ಯವೆಂದರೂ ಮೇಲೇಳಲಿಲ್ಲ. ಇದ್ದಕ್ಕಿದ್ದಂತೆ ಬೀದಿ ದೀಪಗಳೂ ಆರಿಹೋದವು. ಸವಾರ ಮೆಲ್ಲನೇ ಇಳಿದು ಏನಾಯ್ತಪ್ಪಾ ಅಂತ ನೋಡಲು ಬಗ್ಗಿದ. ಆತ ಸುಬ್ರಾಯ. ಸಬ್ ಎಡಿಟರ್ ಸುಬ್ರಾಯ.
ಥಟ್ಟನೆ ವಿಕಟ ನಗೆಯೊಂದು ಕೇಳಿಬಂತು. ಹಿಹ್ಹಿಹ್ಹೀ...ಹ್ಹಿ ಹ್ಹಿ ಹ್ಹೀ...
ಸುಬ್ರಾಯ ಸುತ್ತಲೂ ನೋಡಿದ. ಅರೇ ಯಾರೂ ಇಲ್ಲ. ಆದ್ರೆ ಈ ಸೌಂಡ್ ಎಫೆಕ್ಟ್ ಮಾತ್ರ ಜೋರಾಗಿಯೇ ಇದೆಯಲ್ಲಾ... ಆತ ಕಣ್ಣುಜ್ಜಿಕೊಂಡು ಮತ್ತೆ ನೋಡಿದ. ರಸ್ತೆಯ ಮೇಲೆ ಅಸ್ಪಷ್ಟ ಆಕೃತಿಯೊಂದು ಗೋಚರಿಸಿತು.
ಯಾರ್ರೀ ನೀವು? ಎಂದ ಸುಬ್ರಾಯ ಧಿಮಾಕಿನಲ್ಲಿ.
ಆಕೃತಿ ತೂರಾಡುತ್ತಾ ಚಲಿಸಿ ತೊದಲುತ್ತಾ ನುಡಿಯಿತು. `ನಾನು ಬೇತಾಳ. ಬೇತಾಳ ಆಫ್ ಕಿಂಗ್ ವಿಕ್ರಮಾದಿತ್ಯ. ಸ್ಮಶಾನದ ಹತ್ರ ಇರೋ ಹುಣಸೆ ಮರದ ಫ್ಲ್ಯಾಟ್ ನಂ ಎರಡರಲ್ಲಿ ವಾಸಿಸುತ್ತಿದ್ದೇನೆ. ಅಲ್ಲಿವರೆಗೆ ನನಗೆ ಡ್ರಾಪ್ ಕೊಡ್ತೀರಾ ಪ್ಲೀಸ್... ಕೇಳಿತು.
ಸುಬ್ರಾಯ ಆತಂಕದಿಂದ ಕೇಳಿದ. ಬೇತಾಳ! ಯೂ ಮೀನ್ ಪ್ರೇತ, ದೆವ್ವ? ಮತ್ತೆ ಸಾವರಿಸಿಕೊಂಡು ನೋಡಿದ.
ಪರ್ವಾಗಿಲ್ಲ. ದಿನವೂ ನಾನು ಸುತ್ತಲೂ ನೋಡುತ್ತಿರುವ ಭಯಾನಕ ಪಾತ್ರಗಳಿಗೆ ಹೋಲಿಸಿದರೆ ಇದು ಏನೇನೂ ಅಲ್ಲ ಅನಿಸಿತು. ಸ್ವಲ್ಪ ಧೈರ್ಯಮಾಡಿದ ಸುಬ್ರಾಯ ಜಗ್ಗೇಶ್ ಸ್ಟೈಲಿನಲ್ಲಿ ನುಡಿದ.
ರೆಸ್ಪೆಕ್ಟೆಡ್ ಬೇತಾಳ... ದಿನಾ ನಿನ್ನನ್ನು ವಿಕ್ರಮ ಹೊತ್ತೊಯ್ತಾನೆ. ರಾಜ್ಯಭಾರಕ್ಕಿಂತ ನಿನ್ನ ಭಾರವೇ ಜಾಸ್ತಿಯಾಗಿ ಅವನ ಬೆನ್ನು 45 ಡಿಗ್ರಿ ಬಗ್ಗಿದೆ. ಅಷ್ಟು ಮಾತ್ರವೇ ನಿನ್ನ ಪೀಡೆ. ದಿನವೂ ಅವನಿಗೊಂದು ಡಬ್ಬಾ ಕಥೆ ಹೇಳ್ತೀಯಾ ಮುಗಿಯದ ಮೆಗಾ ಸೀರಿಯಲ್ ಥರ. ಆಮೇಲೆ ತಲೆ ಚಿಟ್ಟು ಹಿಡಿಸೋ ಪ್ರಶ್ನೆ ಕೇಳಿ ಅವನನ್ನೇ ಬ್ಲಾಕ್‌ಮೇಲ್ ಮಾಡಿ ಹಾರಿ ಹೋಗ್ತೀಯಾ. ಪಾಪ ಆತ ಮತ್ತೆ ನಿನ್ನನ್ನು ಹುಡ್ಕೊಂಡು ಬರ್ತಾನೆ. ಅವನ ಕರ್ಮ. ನೀನು ಯಾಕೆ ಯಡಿಯೂರಪ್ಪ, ರೆಡ್ಡಿ ಅಥವಾ ದೇವೇಗೌಡ್ರಿಗೋ ತಗುಲಿಕೊಳ್ಳಬಾರದು? ನೋಡು ನಿನ್ನನ್ನು ಹೊತ್ಕೊಂಡು ಹೋಗೋದಂತೂ ಆಗದು. ನನ್ನ ಗಾಡಿಯೂ ಕೆಟ್ಟಿದೆ. ನೀನು ಕುಡಿದಿದ್ದೀ ಬೇರೆ. ಯಾವುದಾದರೂ ಆಟೋ ಬಂದ್ರೆ ಹತ್ಕೊಂಡು ಹೋಗು ಎಂದ.
ಪ್ರೇತ ಕೇಳಿತು. ರೀ ಮಿಸ್ಟರ್ ನಿಮ್ಮ ಹೆಸರು?
ಸುಬ್ರಾಯ. ಸಬ್ ಎಡಿಟರ್ ಸುಬ್ರಾಯ. ಪ್ರೆಸ್‌ನವನು ಎಂದ ಗತ್ತಿನಿಂದ.
ಹೋ... ಪ್ರೆಸ್‌ನವರಾ ಗೊತ್ತಾಗ್ಲಿಲ್ಲ... ಸಾರಿ, ಅಂದ್ರೆ ನೀವೂ ನನ್ನ(ಪ್ರೇತದ) ಹಾಗೇ ಅನ್ನಿ.
ಸುಬ್ರಾಯ ಹೇಳಿದ. ನೀನು ಯಾರೋ ಏನೋ ಗೊತ್ತಿಲ್ಲ. ಬೈಕ್ ಹಾಳಾಗಿದೆ. ಡ್ರಾಪ್ ಕೊಡೋಕೆ ಆಗಲ್ಲ.
ಪ್ರೇತ ಹೇಳಿತು. ಹಾಗಾದ್ರೆ. ನಾನೇ ರಿಪೇರಿ ಮಾಡ್ತೀನಿ ಎಂದು ತಾನೇ ಕಿತ್ತು ಹಾಕಿದ್ದ ಸ್ಪಾರ್ಕ್ ಪ್ಲಗ್ಗನ್ನು ಮತ್ತೆ ಜೋಡಿಸಿತು.
ಎಲಾ ಕಂತ್ರಿ ಪ್ರೇತವೇ... ಕೋಪ ಬಂದರೂ ಸುಮ್ಮನಾದ ಸುಬ್ರಾಯ. ಈಗ ಹೊತ್ತೊಯ್ಯಲೇಬೇಕಾದ ಪರಿಸ್ಥಿತಿ. ಸರಿ ಕುಳಿತುಕೋ ಎಂದ. ಬೈಕು ನಿಧಾನವಾಗಿ ಹೊರಟಿತು.
*** *** *** *** ***
ಬೇತಾಳ ಹರಟತೊಡಗಿತು. ಅದೂ ಇದೂ ಅಧಿಕ ಪ್ರಸಂಗ ಮಾತನಾಡಿ, ಸುಬ್ರಾಯನ ಕಡೆಗೇ ಹೊರಳಿತು. ಅವನ ಮಾತು ಅದುವರೆಗಿನ ವಿವಿಧೆಡೆಯ ವೃತ್ತಿ ಬದುಕನ್ನು ಆಧರಿಸಿಯೇ ಹೇಳಿದ್ದು. ಸಂಕ್ಷಿಪ್ತ ಸಂದರ್ಶನ ಹೀಗಿದೆ.
ನಾವೂ ಅಷ್ಟೇ `ಗಿರಾಕಿ' ಒಳ್ಳೆಯವನೋ ಕೆಟ್ಟವನೋ ನೋಡುವುದಿಲ್ಲ. ಆ ದಿನ ಪುಟ ತುಂಬಬೇಕು. ವಿಷಯ, ಮೌಲ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಎಷ್ಟೋ ವೇಳೆ ಸಮಾಜದಲ್ಲಿ ನಾಯಿ, ಬೆಕ್ಕಿನ ಜಾಗದಲ್ಲಿರಬೇಕಾದವರನ್ನು ಅಟ್ಟಕ್ಕೇರಿಸಿಬಿಡುತ್ತೇವೆ.
ಉದ್ಯೋಗ ಪರಿಸ್ಥಿತಿಯೂ ಅಷ್ಟೇ. ನಮ್ಮ ಕಷ್ಟಸುಖ ಜನರಿಗಾಗಲೀ, ಮಾಲೀಕರಿಗಾಗಲೀ ಬೇಕಾಗಿರುವುದಿಲ್ಲ. ನಮ್ಮಿಂದ `ಸುಖ' ಪಡೆಯುವುದಷ್ಟೇ ಎಲ್ಲರ ಗುರಿಯಾಗಿರುತ್ತದೆ. ಹಾಗಾಗಿ ನಮಗೊಂದು ಬದುಕು ಇದೆ ಎಂಬುದನ್ನೂ ಮರೆತು ಎಲ್ಲವನ್ನೂ ನುಂಗಿ ಸಹಿಸಿಕೊಳ್ಳಬೇಕು.
ಪ್ರೇತದ ಪ್ರಶ್ನೆ ಕೇಳಿ ಸುಬ್ರಾಯನಿಗೇಕೋ ಸಂಶಯ ಮೂಡಿತು. ಕೇಳಿದ. ಪ್ರೇತವೇ ನೀನು ಬದುಕಿದ್ದಾಗ ಏನಾಗಿದ್ದೆ?
ಪತ್ರಕರ್ತ. ತ್ರಿಲೋಕ ಪತ್ರಿಕೆಯ ತ್ರಿಶಂಕು ಪತ್ರಕರ್ತ. ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದ ಪತ್ರಿಕೆ. ಅದರಲ್ಲಿ ಒಂದು ಪ್ರಮುಖ ಸ್ಥಾನದಲ್ಲಿಯೇ ಇದ್ದೆ.
ಸುಬ್ರಾಯ ಬೈಕ್ ನಿಲ್ಲಿಸಿ ಒಂದುಕ್ಷಣ ಪ್ರೇತದ ಮುಖ ನೋಡಿದ. ಹೌದು ಇದು ಎಲ್ಲೋ ಕಂಡ ಮುಖ. ಮೂತಿಯೂ ಸೊಟ್ಟಗಾಗಿದೆ. ಯಾಕೆ ಈ ಸ್ಥಿತಿ ಬಂತು?
ಕೆಲವು ವರದಿಗಾರರ ಚಲನವಲನಗಳನ್ನು ಸಮಾಜಘಾತುಕ ಶಕ್ತಿಗಳಿಗೆ ನೀಡಿದೆ. ಆದರೆ, ಅವರ ಅದೃಷ್ಟ ಚೆನ್ನಾಗಿತ್ತು. ಅಂದು ತಪ್ಪಿಸಿಕೊಂಡವರು ಈಗ ಒಳ್ಳೆಯ ಕಡೆಯಲ್ಲಿದ್ದಾರೆ. ಸಂಸ್ಥೆಗೂ ಒಂದು ದಿನ ಕೊನೆಗಾಲ ಬಂದೇ ಬಂತು. ಇಂದು ನಾಳೆ ಎಂದು ದಿನಗಣನೆಯಲ್ಲಿದ್ದಾಗ. ನನ್ನ ಕಾರು ಅಪಘಾತಕ್ಕೀಡಾಯಿತು. ಭೂಮಿಗೆ ನನ್ನ ಭಾರ ಕಳೆಯಿತು. ನೋಡು ಮೂಗು ಹೇಗೆ ಸೊಟ್ಟಗಾಗಿದೆ...
ಯಮಲೋಕಕ್ಕೆ ಹೋದೆ. ನನ್ನ ಪಾಪಗಳ ಖಾತೆ ಭರ್ತಿಯಾಗಿತ್ತು. ಅಕ್ಷರ ಲೋಕಕ್ಕೆ ದ್ರೋಹ ಬಗೆದ ಕಾರಣ ಸ್ವರ್ಗ ಬಿಡಿ, ನರಕಕ್ಕೂ ಪ್ರವೇಶ ಸಿಗಲಿಲ್ಲ. ಅಲ್ಲಿಯೂ ಪ್ರತಿಭಟನೆ. ನನ್ನ ಸ್ಥಿತಿಗೆ ಯಮನೂ ಅಸಹಾಯಕನಾದ. ಕೊನೆಗೆ ಹೀಗೆ ಎಡಬಿಡಂಗಿಯಾಗಲು ಭೂಮಿಗೆ ವಾಪಸ್ ಕಳುಹಿಸಿದ. ಈಗ ಯಮಲೋಕದ ಪತ್ರಿಕೆ `ಪಾಶ'ಕ್ಕೆ ಭೂಲೋಕದಿಂದ ಅರೆಕಾಲಿಕ ವರದಿಗಾರನಾಗಿ ದುಡಿಯುತ್ತಿದ್ದೇನೆ. ಈ ಶಾಪ ಯಾವಾಗ ಮುಗಿಯುತ್ತೋ ಗೊತ್ತಿಲ್ಲ.
ಕ್ಷಣ ಕಾಲ ಮೌನದ ನಂತರ ಪ್ರೇತ ಮತ್ತೆ ಮಾತನಾಡಿತು. ಸುಬ್ರಾಯ ನೀವು ನಿಜವಾಗ್ಲೂ ಖುಷಿಯಾಗಿದ್ದೀರಾ?
ಲೈಟ್ ಆಗಿ ಕೆಮ್ಮಿದ ಸುಬ್ರಾಯ ಹೇಳಿದ. ನಿನಗಿಂತ ಸಾವಿರಪಾಲು ನೆಮ್ಮದಿಯಿಂದ ಇದ್ದೇನೆ. ನನಗೊಂದು ನೆಲೆಯಿದೆ. ಉದ್ಯೋಗದ ಕಷ್ಟ ಸುಖ ಎಲ್ಲ ಕ್ಷೇತ್ರದಲ್ಲೂ ಇದ್ದಿದ್ದೇ. ಅದಕ್ಕೆ ಹೆಚ್ಚು ಯೋಚಿಸುವುದಿಲ್ಲ. ನನ್ನೊಂದಿಗೆ ಸಿಡುಕರಿದ್ದಾರೆ ಆದರೆ ಕೆಡುಕರು ಇಲ್ಲವೇ ಇಲ್ಲ.
-ಅಷ್ಟರಲ್ಲಿ ಬೈಕು ಸ್ಮಶಾನ ತಲುಪಿತ್ತು. ಹುಣಸೆಮರವನ್ನು ಕಂಡ ಪ್ರೇತ ಬೈಕಿನಿಂದ ಛಂಗನೆ ಜಿಗಿದು ತನ್ನ ಫ್ಲ್ಯಾಟ್ ಸೇರಿತು.
ಪ್ರೀತಿಯಿಂದ
–ಶರತ್ ಹೆಗ್ಡೆ, ಕಡ್ತಲ

ರದ್ದಿ. ಆಗಲಿ, ಅದ್ಯಾರೋ ಎಸೆದ ನನ್ನ ದೇಹದ ಪಾರ್ಟ್‌ಗಳು ಚದುರದಂತೆ ರಕ್ಷಿಸಿತಲ್ಲಾ ಇದೇ ಪತ್ರಿಕೆಯ ರಾಶಿ. ಸುಸ್ತಿನಲ್ಲೂ ಒಂದು ನಿಟ್ಟುಸಿರು ಹೊರಟಿತು ಆ ಮಗುವಿನ `ಭಯಂಕರ' ಸೂಕ್ಷ್ಮ ನಾಸಿಕದಿಂದ.
ಅರೇ ಏ ದೇಖ್ ಭೈಯಾ. ಪೇಪರ್ ಬಂಡಲ್ ಮೇ ಬಚ್ಚಾ ಹೈ. ಅಬ್ ಹೀ ಪೈದಾ ಹುವಾ ಹೈ. ಕೇಳಿತೊಂದು ಆರ್ದ್ರ ಹೃದಯದ ಧ್ವನಿ. ರದ್ದಿ ಪೇಪರ್ ಆಯುವ ಹುಡುಗರ ಕೈಗೆ ಮಗು ಸಿಕ್ಕಿತು.
*** *** *** *** ***
ಪತ್ರಿಕೆ ರಾಶಿ ಮಧ್ಯೆ ನವಜಾತ ಶಿಶು ಪತ್ತೆ. ಹೆಚ್ಚುಕಡಿಮೆ ಎಲ್ಲಾ ಪತ್ರಿಕೆ, ಟಿವಿ ಚಾನೆಲ್‌ಗಳಲ್ಲಿ ಸುದ್ದಿ ಪ್ರಕಟವಾದವು. ಕೆಲವಂತೂ ಕೋಳಿಗಳ ಥರ ಜನ್ಮ ಮೂಲ ಕೆದಕಲುತೊಡಗಿದವು.
*** *** *** *** ***
ಮಗು ಅದೇ ಹುಡುಗರ ಕೊಳೆಗೇರಿಯಲ್ಲಿ ಬೆಳೆಯಿತು. ಸರ್ವ ಜನಾಂಗದ ಶಾಂತಿಯ ತೋಟದ ವಿಶ್ವಮಾನವನಾಗಿ.
ಸುಟ್ಟೂರು ಸಮೀಪ ಭಾರೀ ಗಾತ್ರದ ಪೇಪರ್ ರಾಶಿಯ ನಡುವೆ ಸಿಕ್ಕ ಮಗುವಿಗೆ ಸುಬ್ರಾಯ ಎಂದು ಹೆಸರಿಸಲಾಯಿತು. ಊರು ಗೊತ್ತಿಲ್ಲ. ಕೇರಿ ಇಲ್ಲ.
ಆತ ಸುಬ್ರಾಯ ಸಬ್ ಎಡಿಟರ್ ಸುಬ್ರಾಯ. ಯಮನಿಂದ ವರಸಹಿತ ಶಾಪ ಪಡೆದು, ಪತ್ರಿಕಾ ರಾಶಿಯ ಮೇಲೆ ಪುನರ್ಜನ್ಮ ಪಡೆದ, ಹುಟ್ಟುತ್ತಲೇ ಎಲ್ಲಾ ಮಾಧ್ಯಮಗಳಲ್ಲೂ ಸುದ್ದಿಯಾಗಿಯೇ ಕಾಣಿಸಿಕೊಂಡ ಸುಬ್ರಾಯ.
ಬಾಲ್ಯದಲ್ಲಿ ಅಷ್ಟಿಷ್ಟು ಓದುವ ಗೀಳು. ಚಂದಮಾಮನಿಂದ ಹಿಡಿದು, ರತಿ ವಿಜ್ಞಾನದವರೆಗೆ. ಎಲ್ಲಕ್ಕಿಂತ ಮಿಗಿಲಾಗಿ ಆತ ಪಡೆದದ್ದು ಲೋಕಾನುಭವ ಶಿಕ್ಷಣ. ಅವರಿವರ ಮನೆಯಲ್ಲಿ ಬೆಳೆಯುವಾಗ, ಅವರ ಮನೆ ಕಥೆ ಇವರಿಗೆ, ಇವರದ್ದು ಅವರಿಗೆ ಹೇಳುವ, ಮೂಲಕ ಎಲ್ಲರ ಮನೆ ದೋಸೆಯೂ ತೂತೇ ಎಂಬುದನ್ನು ಇಡೀ ಕೇರಿಗೆ ತೋರಿಸಿಬಿಟ್ಟ. ಒಂದು ವಿಷಯವನ್ನು ಯಥಾವತ್ತಾಗಿ ಇನ್ನೊಬ್ಬರಿಗೆ ಹೇಳುವ ಕಲೆ ಅವನಿಗೆ ಕರಗತವಾಗಿತ್ತು. ಅವನೇ ಆ ಕೇರಿಯಲ್ಲೊಂದು ಪ್ರಭಾವೀ ನ್ಯೂಸ್ ಚಾನೆಲ್ ಆಗಿ ಬೆಳೆದಿದ್ದ. ಸ್ವಲ್ಪಕಾಲ ಕಾಲೇಜು ಸೇರಿ ಅಲ್ಲಿಯೂ ಕಾಲಹರಣ ಮಾಡಿದ. ಅಲ್ಲಿ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ.
ಒಂದು ಜಾತಿಯಿಲ್ಲ, ಕತೆಯಿಲ್ಲ. ಮೇಲೂ ಅಲ್ಲ, ಕೆಳಗೂ ಅಲ್ಲ. ಒಂದು `ಬೆಲ್ಟ್' ಅಂತಂದ್ರೇನು ಗೊತ್ತಿಲ್ಲ. ಜಾತಿಯಿಲ್ಲದವನಿಗೆ ಈ ದೇಶದಲ್ಲಿ ಉದ್ಯೋಗ ಬಿಡಿ. ರೈಲ್ವೆ ರಿಸರ್ವೇಷನ್ ಕೂಡಾ ಸಿಗುವುದಿಲ್ಲ. ಅಂಥವನಿಗೆ ಯಾರು ಕೆಲಸ ಕೊಡ್ತಾರೆ. ಸುಬ್ರಾಯ ಕೆಲಸಕ್ಕೆ ಅಲೆದಲೆದು ಸುಸ್ತಾದ.
ಆದರೇನಂತೆ ಯಮ ಶಾಪ ಸುಳ್ಳಾಗುವುದೇ? ಅದ್ಯಾವುದೋ ಅನಿವಾರ್ಯತೆಯ ಬಿರುಗಾಳಿ ಆತನನ್ನು ಪತ್ರಿಕಾ ಕಚೇರಿಯೊಳಗೇ ತಂದುಹಾಕಿತು.
ಹುಟ್ಟಿದಾಗ ಅದ್ಯಾರೋ ಎಸೆದ ತನ್ನ ದೇಹಕ್ಕೆ ಒಂದಿನಿತೂ ನೋವಾಗದಂತೆ ರಕ್ಷಿಸಿದ್ದು ಪತ್ರಿಕೆ ರಾಶಿಯೇ ಅಲ್ಲವೇ. ಹಾಗಾದರೆ ಬದುಕು ಕೊಡಬೇಕಾದದ್ದೂ ಅದೇ. ಇದೇ ನನ್ನ ಕರ್ಮಭೂಮಿ ಅಂದುಕೊಂಡು ಸಮಾಧಾನ ತಂದುಕೊಂಡ ಸುಬ್ರಾಯ.
*** *** *** *** *** *** *** ***
ಎಂದಿನಂತೆ ವಿಕ್ರಮನ ಹೆಗಲಿನಿಂದ ತಪ್ಪಿಸಿಕೊಂಡ ಬೇತಾಳವು ಅಭ್ಯಾಸಬಲದಿಂದ ಪಿ.ಬಿ. ರಸ್ತೆಯ ರಾಜಭವನ ಬಾರಿನೊಳಗೆ ನುಗ್ಗಿತು. ಅವರಿವರು ಕುಡಿದು ಗ್ಲಾಸಿನ ತಳದಲ್ಲಿ ಉಳಿಸಿದ್ದ ಕೆಲವು ಹನಿಗಳನ್ನು ನೆಕ್ಕಿ ನೆಕ್ಕಿ `ಟೈಟ್' ಆಗತೊಡಗಿತು. ನೆಕ್ಕಿದ್ದೇ ಪಂಚಾಮೃತ ಎಂದು ಭಾವಿಸಿದ ಪ್ರೇತಕ್ಕೆ ಎಲ್ಲಾ ಬ್ರಾಂಡ್‌ಗಳೂ ಡ್ರೈ ಆಗಿಯೇ ಮಿಕ್ಸ್ ಆಗಿದ್ದರಿಂದ ಕಾಕ್‌ಟೇಲ್ ಕುಡಿದ ಅನುಭವವಾಗತೊಡಗಿತು. ಬಾರಿನ ಹುಡುಗರು ಹಾಕಿದ ಸಾಂಬ್ರಾಣಿ ಹೊಗೆಯ ಘಾಟು ತಾಳಲಾರದೇ ಅಲ್ಲಿಂದ ತೂರಾಡುತ್ತಾ ಹೊರಬೀಳಲೇಬೇಕಾಯಿತು.
*** *** *** *** *** ***
ಸರಿಸುಮಾರು ಮಧ್ಯರಾತ್ರಿ. ಬೈಕೊಂದು ನಿಧಾನವಾಗಿ ಆ ರಸ್ತೆಯಲ್ಲಿ ಬಂತು. ಪಿ.ಬಿ. ರಸ್ತೆಯ ಹೊಂಡಗಳೆಂಬೋ ಸ್ಪೀಡ್‌ಬ್ರೇಕರ್ ಮಧ್ಯೆ ಗಜಕ್ಕನೆ ಸಿಕ್ಕಿಹಾಕಿಕೊಂಡ ವಾಹನ ಜಪ್ಪಯ್ಯವೆಂದರೂ ಮೇಲೇಳಲಿಲ್ಲ. ಇದ್ದಕ್ಕಿದ್ದಂತೆ ಬೀದಿ ದೀಪಗಳೂ ಆರಿಹೋದವು. ಸವಾರ ಮೆಲ್ಲನೇ ಇಳಿದು ಏನಾಯ್ತಪ್ಪಾ ಅಂತ ನೋಡಲು ಬಗ್ಗಿದ. ಆತ ಸುಬ್ರಾಯ. ಸಬ್ ಎಡಿಟರ್ ಸುಬ್ರಾಯ.
ಥಟ್ಟನೆ ವಿಕಟ ನಗೆಯೊಂದು ಕೇಳಿಬಂತು. ಹಿಹ್ಹಿಹ್ಹೀ...ಹ್ಹಿ ಹ್ಹಿ ಹ್ಹೀ...
ಸುಬ್ರಾಯ ಸುತ್ತಲೂ ನೋಡಿದ. ಅರೇ ಯಾರೂ ಇಲ್ಲ. ಆದ್ರೆ ಈ ಸೌಂಡ್ ಎಫೆಕ್ಟ್ ಮಾತ್ರ ಜೋರಾಗಿಯೇ ಇದೆಯಲ್ಲಾ... ಆತ ಕಣ್ಣುಜ್ಜಿಕೊಂಡು ಮತ್ತೆ ನೋಡಿದ. ರಸ್ತೆಯ ಮೇಲೆ ಅಸ್ಪಷ್ಟ ಆಕೃತಿಯೊಂದು ಗೋಚರಿಸಿತು.
ಯಾರ್ರೀ ನೀವು? ಎಂದ ಸುಬ್ರಾಯ ಧಿಮಾಕಿನಲ್ಲಿ.
ಆಕೃತಿ ತೂರಾಡುತ್ತಾ ಚಲಿಸಿ ತೊದಲುತ್ತಾ ನುಡಿಯಿತು. `ನಾನು ಬೇತಾಳ. ಬೇತಾಳ ಆಫ್ ಕಿಂಗ್ ವಿಕ್ರಮಾದಿತ್ಯ. ಸ್ಮಶಾನದ ಹತ್ರ ಇರೋ ಹುಣಸೆ ಮರದ ಫ್ಲ್ಯಾಟ್ ನಂ ಎರಡರಲ್ಲಿ ವಾಸಿಸುತ್ತಿದ್ದೇನೆ. ಅಲ್ಲಿವರೆಗೆ ನನಗೆ ಡ್ರಾಪ್ ಕೊಡ್ತೀರಾ ಪ್ಲೀಸ್... ಕೇಳಿತು.
ಸುಬ್ರಾಯ ಆತಂಕದಿಂದ ಕೇಳಿದ. ಬೇತಾಳ! ಯೂ ಮೀನ್ ಪ್ರೇತ, ದೆವ್ವ? ಮತ್ತೆ ಸಾವರಿಸಿಕೊಂಡು ನೋಡಿದ.
ಪರ್ವಾಗಿಲ್ಲ. ದಿನವೂ ನಾನು ಸುತ್ತಲೂ ನೋಡುತ್ತಿರುವ ಭಯಾನಕ ಪಾತ್ರಗಳಿಗೆ ಹೋಲಿಸಿದರೆ ಇದು ಏನೇನೂ ಅಲ್ಲ ಅನಿಸಿತು. ಸ್ವಲ್ಪ ಧೈರ್ಯಮಾಡಿದ ಸುಬ್ರಾಯ ಜಗ್ಗೇಶ್ ಸ್ಟೈಲಿನಲ್ಲಿ ನುಡಿದ.
ರೆಸ್ಪೆಕ್ಟೆಡ್ ಬೇತಾಳ... ದಿನಾ ನಿನ್ನನ್ನು ವಿಕ್ರಮ ಹೊತ್ತೊಯ್ತಾನೆ. ರಾಜ್ಯಭಾರಕ್ಕಿಂತ ನಿನ್ನ ಭಾರವೇ ಜಾಸ್ತಿಯಾಗಿ ಅವನ ಬೆನ್ನು 45 ಡಿಗ್ರಿ ಬಗ್ಗಿದೆ. ಅಷ್ಟು ಮಾತ್ರವೇ ನಿನ್ನ ಪೀಡೆ. ದಿನವೂ ಅವನಿಗೊಂದು ಡಬ್ಬಾ ಕಥೆ ಹೇಳ್ತೀಯಾ ಮುಗಿಯದ ಮೆಗಾ ಸೀರಿಯಲ್ ಥರ. ಆಮೇಲೆ ತಲೆ ಚಿಟ್ಟು ಹಿಡಿಸೋ ಪ್ರಶ್ನೆ ಕೇಳಿ ಅವನನ್ನೇ ಬ್ಲಾಕ್‌ಮೇಲ್ ಮಾಡಿ ಹಾರಿ ಹೋಗ್ತೀಯಾ. ಪಾಪ ಆತ ಮತ್ತೆ ನಿನ್ನನ್ನು ಹುಡ್ಕೊಂಡು ಬರ್ತಾನೆ. ಅವನ ಕರ್ಮ. ನೀನು ಯಾಕೆ ಯಡಿಯೂರಪ್ಪ, ರೆಡ್ಡಿ ಅಥವಾ ದೇವೇಗೌಡ್ರಿಗೋ ತಗುಲಿಕೊಳ್ಳಬಾರದು? ನೋಡು ನಿನ್ನನ್ನು ಹೊತ್ಕೊಂಡು ಹೋಗೋದಂತೂ ಆಗದು. ನನ್ನ ಗಾಡಿಯೂ ಕೆಟ್ಟಿದೆ. ನೀನು ಕುಡಿದಿದ್ದೀ ಬೇರೆ. ಯಾವುದಾದರೂ ಆಟೋ ಬಂದ್ರೆ ಹತ್ಕೊಂಡು ಹೋಗು ಎಂದ.
ಪ್ರೇತ ಕೇಳಿತು. ರೀ ಮಿಸ್ಟರ್ ನಿಮ್ಮ ಹೆಸರು?
ಸುಬ್ರಾಯ. ಸಬ್ ಎಡಿಟರ್ ಸುಬ್ರಾಯ. ಪ್ರೆಸ್‌ನವನು ಎಂದ ಗತ್ತಿನಿಂದ.
ಹೋ... ಪ್ರೆಸ್‌ನವರಾ ಗೊತ್ತಾಗ್ಲಿಲ್ಲ... ಸಾರಿ, ಅಂದ್ರೆ ನೀವೂ ನನ್ನ(ಪ್ರೇತದ) ಹಾಗೇ ಅನ್ನಿ.
ಸುಬ್ರಾಯ ಹೇಳಿದ. ನೀನು ಯಾರೋ ಏನೋ ಗೊತ್ತಿಲ್ಲ. ಬೈಕ್ ಹಾಳಾಗಿದೆ. ಡ್ರಾಪ್ ಕೊಡೋಕೆ ಆಗಲ್ಲ.
ಪ್ರೇತ ಹೇಳಿತು. ಹಾಗಾದ್ರೆ. ನಾನೇ ರಿಪೇರಿ ಮಾಡ್ತೀನಿ ಎಂದು ತಾನೇ ಕಿತ್ತು ಹಾಕಿದ್ದ ಸ್ಪಾರ್ಕ್ ಪ್ಲಗ್ಗನ್ನು ಮತ್ತೆ ಜೋಡಿಸಿತು.
ಎಲಾ ಕಂತ್ರಿ ಪ್ರೇತವೇ... ಕೋಪ ಬಂದರೂ ಸುಮ್ಮನಾದ ಸುಬ್ರಾಯ. ಈಗ ಹೊತ್ತೊಯ್ಯಲೇಬೇಕಾದ ಪರಿಸ್ಥಿತಿ. ಸರಿ ಕುಳಿತುಕೋ ಎಂದ. ಬೈಕು ನಿಧಾನವಾಗಿ ಹೊರಟಿತು.
*** *** *** *** ***
ಬೇತಾಳ ಹರಟತೊಡಗಿತು. ಅದೂ ಇದೂ ಅಧಿಕ ಪ್ರಸಂಗ ಮಾತನಾಡಿ, ಸುಬ್ರಾಯನ ಕಡೆಗೇ ಹೊರಳಿತು. ಅವನ ಮಾತು ಅದುವರೆಗಿನ ವಿವಿಧೆಡೆಯ ವೃತ್ತಿ ಬದುಕನ್ನು ಆಧರಿಸಿಯೇ ಹೇಳಿದ್ದು. ಸಂಕ್ಷಿಪ್ತ ಸಂದರ್ಶನ ಹೀಗಿದೆ.
*ರೀ ಸುಬ್ರಾಯ ನೀವು ಕೆಲ್ಸ ಮಾಡೋ ಪತ್ರಿಕೆ ಯಾವುದು?
`ಬೌಬೌ' ಅಂತ ಹೆಸರು.*ಬೌಬೌ ನಾ ಅದ್ಯಾಕ್ರೀ ಅಂಥ ಹೆಸರು?
ನಾವೇ ಹೇಳ್ಕೊಳ್ತೀವಲ್ಲಾ ಪತ್ರಿಕೆ ಪ್ರಜಾಪ್ರಭುತ್ವದ ಕಾವಲು ನಾಯಿ ಅಂತ. ಹಾಗೆಂದು ಯಾರಾದ್ರು ನಾಯಿ ಹೆಸರನ್ನ ಪೇಪರ್‌ಗೆ ಇಡ್ತಾರಾ? ನಮ್ಮನ್ನೇ ನಾಯಿಗೆ ಹೋಲಿಸ್ಕೊಂಡ ನಾವು ಅದು ಬೊಗಳುವ ಧ್ವನಿಯನ್ನೇ ಪತ್ರಿಕೆಗೆ ಯಾಕಿಡಬಾರದು? ನಮ್ಮ ಪರಿಸ್ಥಿತಿಯೂ ಅದಕ್ಕಿಂತ ಭಿನ್ನವೇನಲ್ಲವಲ್ಲ... ಹಾಗಾಗಿ ಈ ಹೆಸರು ಡಿಫರೆಂಟ್. ಮಾರುಕಟ್ಟೆ ತಂತ್ರವೂ ಹೌದು.*ಪತ್ರಿಕೆ ಕೆಲಸ ಅಂದ್ರೆ ಹೇಗೆ?
ವೇಶ್ಯಾವಾಟಿಕೆಯ ಹಾಗೆ. ಜನಸಾಮಾನ್ಯರು, ಕಳ್ಳರು, ಪೊಲೀಸರು, ಬಾಯಿಬಡಕರು, ಅತೃಪ್ತರು, ರಾಜಕಾರಣಿಗಳು, ಎಲ್ಲರೂ ಬಳಸಿಕೊಳ್ತಾರೆ. ಬೇಡಾದಾಗ ಬಿಸಾಡ್ತಾರೆ. ಏಡ್ಸ್ ಬಂದ್ರೆ( ಸುದ್ದಿ ಉಲ್ಟಾ ಹೊಡೆದು ವಿವಾದ ಆದ್ರೆ) ಎಲ್ಲಾ ಈ ....ಮಕ್ಳಿಂದಾನೇ ಆಗಿದ್ದು ಅಂತ ಬೈಕೋತಾರೆ. ಕೃತಜ್ಞತೆಯಿಲ್ಲದ ಜನ.ನಾವೂ ಅಷ್ಟೇ `ಗಿರಾಕಿ' ಒಳ್ಳೆಯವನೋ ಕೆಟ್ಟವನೋ ನೋಡುವುದಿಲ್ಲ. ಆ ದಿನ ಪುಟ ತುಂಬಬೇಕು. ವಿಷಯ, ಮೌಲ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಎಷ್ಟೋ ವೇಳೆ ಸಮಾಜದಲ್ಲಿ ನಾಯಿ, ಬೆಕ್ಕಿನ ಜಾಗದಲ್ಲಿರಬೇಕಾದವರನ್ನು ಅಟ್ಟಕ್ಕೇರಿಸಿಬಿಡುತ್ತೇವೆ.
ಉದ್ಯೋಗ ಪರಿಸ್ಥಿತಿಯೂ ಅಷ್ಟೇ. ನಮ್ಮ ಕಷ್ಟಸುಖ ಜನರಿಗಾಗಲೀ, ಮಾಲೀಕರಿಗಾಗಲೀ ಬೇಕಾಗಿರುವುದಿಲ್ಲ. ನಮ್ಮಿಂದ `ಸುಖ' ಪಡೆಯುವುದಷ್ಟೇ ಎಲ್ಲರ ಗುರಿಯಾಗಿರುತ್ತದೆ. ಹಾಗಾಗಿ ನಮಗೊಂದು ಬದುಕು ಇದೆ ಎಂಬುದನ್ನೂ ಮರೆತು ಎಲ್ಲವನ್ನೂ ನುಂಗಿ ಸಹಿಸಿಕೊಳ್ಳಬೇಕು.
*ಕೆಲಸದಲ್ಲಿ ನಿಮ್ಮ ಬಾಸ್‌ನ್ನು ಹೇಗೆ ಖುಷಿಪಡಿಸುತ್ತೀರಿ?
-ಅಂಥದ್ದೊಂದು ಅಪಾಯಕಾರಿ ಕೆಲಸಕ್ಕೆ ಕೈಹಾಕಲೇಬಾರದು. `ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒದೆಯಬೇಡಿ' ಅಂತ ಬೇಡಿಕೊಂಡೇ ಹತ್ತಿರ ಸುಳಿದರೂ ಯಾವಾಗ ಅಪಾಯ ಎದುರಾಗುತ್ತೆ ಎನ್ನಲಾಗದು. ಅದಕ್ಕಾಗಿ ಲಾರಿ, ಟ್ರ್ಯಾಕ್ಟರ್ ಹಿಂದೆ ಬರೆದಿರುತ್ತದಲ್ಲಾ, `ನಡುವೆ ಸುರಕ್ಷಿತ ಅಂತರವಿರಲಿ' ಅಂತ. ಆ ತತ್ವ ಪಾಲಿಸಬೇಕು. ನಮ್ಮಂಥ ಬೈಕಿನವರು ಇಂಥ `ಇಕ್ಕಟ್ಟಿನ ರಸ್ತೆ'ಯಲ್ಲಿ `ಭಾರೀ ವಾಹನ' ಓವರ್‌ಟೇಕ್ ಮಾಡೋದಿಕ್ಕೆ ಹೋದ್ರೆ ಏನಾದೀತು ಹೇಳು?*ಹಾಗಾದ್ರೆ ಬಾಸ್ ಮುಂದೆ ಹೇಗಿರಬೇಕು?
ಭೀಕರ ದುರಂತದಲ್ಲಿ ನಮ್ಮ ಅತ್ಯಂತ ಆಪ್ತರೊಬ್ಬರು ಸಾವನ್ನಪ್ಪಿ, ಈಗತಾನೇ ಅವರ ಅಂತ್ಯ ಸಂಸ್ಕಾರ ಮುಗಿಸಿ ಬಂದವರ ಹಾಗಿರಬೇಕು. ಇಲ್ಲವಾದರೆ `ನಿಮಗೆ ಸೀರಿಯಸ್‌ನೆಸ್ ಇಲ್ಲವೇನ್ರೀ?' ಅಂತ ಉಗಿಸಿಕೊಳ್ಳಬೇಕಾಗುತ್ತದೆ.* ಮಾಲೀಕರಿಗೂ ಬಾಸ್‌ಗೂ ಏನು ವ್ಯತ್ಯಾಸ?
ಹೋರಿಯೊಂದರ ಕೊಂಬು ಮತ್ತು ಬಾಲದ ಹಾಗೆ. ಕೊಂಬಿಗೆ ಎತ್ತಿ ಒಗೆದು ಸಾಯಿಸಿಬಿಡುವ ಸಾಮರ್ಥ್ಯ ಇರುತ್ತದೆ. ಆದರೆ ಹಾಗೆ ಮಾಡದು. ಆದರೆ ಬಾಲ ಇದೆಯಲ್ಲಾ, ಅದು ಆಗಾಗ ಬೀಸುತ್ತಾ ಹೊಡೀತೀನಿ ಬಡೀತೀನೀ ಅಂತ ಹೇಳ್ತಾನೇ ಇರುತ್ತೆ.*ಬಾಸನ್ನು ಹೇಗೆ ಭಾವಿಸ್ತೀರಿ?
ಅವರ ಪರದಾಟ, ಪೀಕಲಾಟ, ಅಸಹಾಯಕತೆ, ಕೂಗಾಡುವಿಕೆ ಇವೆಲ್ಲಾ ನಮಗೆ ಮನೋರಂಜನೆಯ ವಸ್ತುಗಳು.*ನಿಮ್ಮ ಆರೋಗ್ಯ ಮತ್ತು ಸಂತೋಷದ ಗುಟ್ಟು?
ಬೈಗುಳ. ಜನ್ಮಾರಾಭ್ಯದಿಂದ ಇಂದಿನವರೆಗೂ ಆಹಾರಕ್ಕಿಂತ ಬೈಗುಳ ಸೇವಿಸಿದ್ದೇ ಹೆಚ್ಚು. ಹೀಗಾಗಿ ಅದೇ ಟಾನಿಕ್. `ನಿಮ್ಮ ಬೈಗುಳವೆನಗೆ ಹಸಾದವಯ್ಯಾ ಕೋಪಸಂಗಮದೇವಾ' ಅಂತ ಹಾಡಿಕೊಳ್ಳುತ್ತೇನೆ.* ಒಂದು ವೇಳೆ ನೀವೇನಾದ್ರೂ ಬಾಸ್ ಸ್ಥಾನಕ್ಕೆ ಹೋದ್ರೆ?
ದಯವಿಟ್ಟು ಬೇಡ. ಹಾಗೇನಾದರೂ ಆದ್ರೆ ಕೆಲಸ ಬಿಟ್ಟು ಹೋಗುತ್ತೇನೆ. ಪ್ರೇತವೇ ಅಧಿಕಾರದ ಮುಳ್ಳಿನ ಕುರ್ಚಿ, ಅದರಲ್ಲಿ ಕುಳಿತು ಇತರರಿಗೆ ಬೈಯೋದು. ಓರಗೆಯವರ ಓರೆನೋಟ, ....ಮಗ್ನೇ ನಿನ್ನ ನೋಡ್ಕೋತೀನಿ ಅಂತ ಅವರು ಮನಸ್ಸಿನಲ್ಲೇ ಶಾಪ ಹಾಕೋದು ಬೇಡ.* ಜೀವನದಲ್ಲಿ ನಿಮ್ಮ ಗುರಿ?
ಸಾಯೋತನಕ ಖುಷಿಯಾಗಿದ್ದು, ಮುಖದಲ್ಲಿ ಮಾತ್ರ ಸೂತಕದ ಛಾಯೆ ಧರಿಸಿ ಕೆಲಸ ಮಾಡುವುದು.ಪ್ರೇತದ ಪ್ರಶ್ನೆ ಕೇಳಿ ಸುಬ್ರಾಯನಿಗೇಕೋ ಸಂಶಯ ಮೂಡಿತು. ಕೇಳಿದ. ಪ್ರೇತವೇ ನೀನು ಬದುಕಿದ್ದಾಗ ಏನಾಗಿದ್ದೆ?
ಪತ್ರಕರ್ತ. ತ್ರಿಲೋಕ ಪತ್ರಿಕೆಯ ತ್ರಿಶಂಕು ಪತ್ರಕರ್ತ. ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದ ಪತ್ರಿಕೆ. ಅದರಲ್ಲಿ ಒಂದು ಪ್ರಮುಖ ಸ್ಥಾನದಲ್ಲಿಯೇ ಇದ್ದೆ.
ಸುಬ್ರಾಯ ಬೈಕ್ ನಿಲ್ಲಿಸಿ ಒಂದುಕ್ಷಣ ಪ್ರೇತದ ಮುಖ ನೋಡಿದ. ಹೌದು ಇದು ಎಲ್ಲೋ ಕಂಡ ಮುಖ. ಮೂತಿಯೂ ಸೊಟ್ಟಗಾಗಿದೆ. ಯಾಕೆ ಈ ಸ್ಥಿತಿ ಬಂತು?
ಪ್ರೇತ ಮಾರ್ಮಿಕವಾಗಿ ಮಾತು ಆರಂಭಿಸಿತು.
ಸರಸ್ವತಿಗೆ ದ್ರೋಹ ಬಗೆದರೆ ಆಗುವ ಪಾಡು ಇದು. ಒಳ್ಳೆಯ ಸಂಸ್ಥೆಯಲ್ಲಿ ಒಳ್ಳೆಯ ಸ್ಥಾನದಲ್ಲಿಯೇ ಇದ್ದೆ. ಆದ್ರೆ ನನ್ನ ಬುದ್ದಿ ಯಾಕೆ ಕಂತ್ರಿ ಆಯ್ತೋ ತಿಳಿಯದು. ನಮ್ಮಲ್ಲೂ ಸುಬ್ರಾಯ ಅನ್ನುವ ವರದಿಗಾರ ಇದ್ದ. ಅವನೇನು ಉಳಿದವರೂ ಒಳ್ಳೆಯ ಘಟಾನುಘಟಿಗಳೇ ಇದ್ರು. ಆದ್ರೆ ನಾನೇ ಅವರನ್ನು ತೀರಾ ಕೆಟ್ಟದಾಗಿ ನಡೆಸಿಕೊಂಡೆ. ಕೊಡಬಾರದ ಹಿಂಸೆಕೊಟ್ಟೆ. ಒಳ್ಳೆಯ ವರದಿಗಳನ್ನು ಪ್ರಾಮಾಣಿಕರಿಂದ ಬರೆಸಿ ಅದರ ಮೂಲಕ ಕೆಲವರನ್ನು ಬ್ಲಾಕ್‌ಮೇಲ್ ಮಾಡಿದೆ. ನನ್ನ ಹುನ್ನಾರಕ್ಕೆ ಸಹೋದ್ಯೋಗಿಗಳು, ಪತ್ರಿಕೆ ಕೆಟ್ಟ ಹೆಸರು ಪಡೆದದ್ದೂ ಆಯಿತು... ದೀರ್ಘ ಉಸಿರೆಳೆಯಿತು ಪ್ರೇತ.ಕೆಲವು ವರದಿಗಾರರ ಚಲನವಲನಗಳನ್ನು ಸಮಾಜಘಾತುಕ ಶಕ್ತಿಗಳಿಗೆ ನೀಡಿದೆ. ಆದರೆ, ಅವರ ಅದೃಷ್ಟ ಚೆನ್ನಾಗಿತ್ತು. ಅಂದು ತಪ್ಪಿಸಿಕೊಂಡವರು ಈಗ ಒಳ್ಳೆಯ ಕಡೆಯಲ್ಲಿದ್ದಾರೆ. ಸಂಸ್ಥೆಗೂ ಒಂದು ದಿನ ಕೊನೆಗಾಲ ಬಂದೇ ಬಂತು. ಇಂದು ನಾಳೆ ಎಂದು ದಿನಗಣನೆಯಲ್ಲಿದ್ದಾಗ. ನನ್ನ ಕಾರು ಅಪಘಾತಕ್ಕೀಡಾಯಿತು. ಭೂಮಿಗೆ ನನ್ನ ಭಾರ ಕಳೆಯಿತು. ನೋಡು ಮೂಗು ಹೇಗೆ ಸೊಟ್ಟಗಾಗಿದೆ...
ಯಮಲೋಕಕ್ಕೆ ಹೋದೆ. ನನ್ನ ಪಾಪಗಳ ಖಾತೆ ಭರ್ತಿಯಾಗಿತ್ತು. ಅಕ್ಷರ ಲೋಕಕ್ಕೆ ದ್ರೋಹ ಬಗೆದ ಕಾರಣ ಸ್ವರ್ಗ ಬಿಡಿ, ನರಕಕ್ಕೂ ಪ್ರವೇಶ ಸಿಗಲಿಲ್ಲ. ಅಲ್ಲಿಯೂ ಪ್ರತಿಭಟನೆ. ನನ್ನ ಸ್ಥಿತಿಗೆ ಯಮನೂ ಅಸಹಾಯಕನಾದ. ಕೊನೆಗೆ ಹೀಗೆ ಎಡಬಿಡಂಗಿಯಾಗಲು ಭೂಮಿಗೆ ವಾಪಸ್ ಕಳುಹಿಸಿದ. ಈಗ ಯಮಲೋಕದ ಪತ್ರಿಕೆ `ಪಾಶ'ಕ್ಕೆ ಭೂಲೋಕದಿಂದ ಅರೆಕಾಲಿಕ ವರದಿಗಾರನಾಗಿ ದುಡಿಯುತ್ತಿದ್ದೇನೆ. ಈ ಶಾಪ ಯಾವಾಗ ಮುಗಿಯುತ್ತೋ ಗೊತ್ತಿಲ್ಲ.
ಕ್ಷಣ ಕಾಲ ಮೌನದ ನಂತರ ಪ್ರೇತ ಮತ್ತೆ ಮಾತನಾಡಿತು. ಸುಬ್ರಾಯ ನೀವು ನಿಜವಾಗ್ಲೂ ಖುಷಿಯಾಗಿದ್ದೀರಾ?
ಲೈಟ್ ಆಗಿ ಕೆಮ್ಮಿದ ಸುಬ್ರಾಯ ಹೇಳಿದ. ನಿನಗಿಂತ ಸಾವಿರಪಾಲು ನೆಮ್ಮದಿಯಿಂದ ಇದ್ದೇನೆ. ನನಗೊಂದು ನೆಲೆಯಿದೆ. ಉದ್ಯೋಗದ ಕಷ್ಟ ಸುಖ ಎಲ್ಲ ಕ್ಷೇತ್ರದಲ್ಲೂ ಇದ್ದಿದ್ದೇ. ಅದಕ್ಕೆ ಹೆಚ್ಚು ಯೋಚಿಸುವುದಿಲ್ಲ. ನನ್ನೊಂದಿಗೆ ಸಿಡುಕರಿದ್ದಾರೆ ಆದರೆ ಕೆಡುಕರು ಇಲ್ಲವೇ ಇಲ್ಲ.
*ನಿಮ್ಮ ಸಂದೇಶ ಏನು? ಎಂದು ಪ್ರೇತ ಕೇಳಿತು.
ಪ್ರೇತವೇ ನಿನ್ನ ಶಾಪ ಆದಷ್ಟು ಬೇಗ ಮುಕ್ತಿಯಾಗಲಿ. ಈ ಸ್ಥಿತಿ ಯಾರಿಗೂ ಬಾರದಿರಲಿ. ಈ ಕ್ಷೇತ್ರದಲ್ಲಿ ಯಾರೂ ನಿನ್ನ ಹಾಗೆ ಮಾಡದಿರಲಿ.-ಅಷ್ಟರಲ್ಲಿ ಬೈಕು ಸ್ಮಶಾನ ತಲುಪಿತ್ತು. ಹುಣಸೆಮರವನ್ನು ಕಂಡ ಪ್ರೇತ ಬೈಕಿನಿಂದ ಛಂಗನೆ ಜಿಗಿದು ತನ್ನ ಫ್ಲ್ಯಾಟ್ ಸೇರಿತು.
ಪ್ರೀತಿಯಿಂದ
–ಶರತ್ ಹೆಗ್ಡೆ, ಕಡ್ತಲ