ಮೊನ್ನೆ ಕಡ್ತಲದ ಗಣೇಶೋತ್ಸವ ನಡೆಯಿತು. ಹಾ ಎಲ್ಲ ಊರಿನಲ್ಲಿಯೂ ನಡೆಯಿತು. ಅದರಲ್ಲೇನು ವಿಶೇಷ? ಅಂತ ನೀವು ಕೇಳಬಹುದು. ಆದರೆ, ಕಡ್ತಲದ ಗಣೇಶ ನನ್ನ ಪಾಲಿಗೆ ನಿಜವಾದ ಶಕ್ತಿಶಾಲಿ ಗಣೇಶ.
ಏಕೆಂದರೆ ನಮ್ಮೂರಿಗೆ ಅವನೊಬ್ಬನೇ ಗಣೇಶ (ಈಗ ದರ್ಬುಜೆ ವಿಷ್ಣುಮೂರ್ತಿ ಗೋಪಾಲಕೃಷ್ಣ ದೇವಸ್ಥಾನದಲ್ಲಿಯೂ ಬಂದು ಕುಳಿತಿದ್ದಾನೆ. ಅದು ಬೇರೆ ವಿಚಾರ) ನಮ್ಮ ಪಕ್ಕದ ದೊಂಡೆರಂಗಡಿಗೆ ಹೋಗಿ ಅಲ್ಲಿ ಮೂರು ಗಣೇಶ ಇದ್ದಾರೆ. ಅಜೆಕಾರಿಗೆ ಹೋಗಿ ಅಲ್ಲಿ ಕನಿಷ್ಠ ಇಬ್ಬರು ಗಣೇಶ. ಕಾರ್ಕಳದಲ್ಲಿ ಹಲವು ಗಣೇಶ. ಆದರೆ, ಕಡ್ತಲದಲ್ಲಿ ಎಲ್ಲ ಮನಸ್ಸುಗಳನ್ನು ಒಂದೇ ಕಡೆ ಕೇಂದ್ರೀಕರಿಸಿ ಒಟ್ಟಾಗಿ ಕಲೆಯುವಂತೆ ಮಾಡಿದ್ದಾನೆ ಗಣೇಶ.
ಈ ಗಣೇಶನ ವೇದಿಕೆಯಿಂದಲೇ ನಾನು, ನನ್ನಂಥವರು ಮೈಕ್ ಮುಂದೆ ನಿರರ್ಗಳವಾಗಿ ಒದರುವುದನ್ನು ಕಲಿತಿದ್ದೇವೆ. ಬಣ್ಣ ಹಚ್ಚಿ ಕುಣಿದಿದ್ದೇವೆ. ನಕ್ಕು ನಲಿದಿದ್ದೇವೆ. ಕೆಲವೊಮ್ಮೆ ಜಗಳವಾಡಿದ್ದೇವೆ. ತೋರಣ, ಲೈಟಿಂಗ್, ಮೈಕ್ ಕಟ್ಟುವುದರಿಂದ ಹಿಡಿದು ಪ್ರತಿ ಕೆಲಸದಲ್ಲಿಯೂ ಒಂದೈದು ವರ್ಷಗಳ ಹಿಂದಿನವರೆಗೂ ಪಾಲ್ಗೊಂಡಿದ್ದೇನೆ. ಸಮಿತಿಯ ಮೀಟಿಂಗುಗಳಲ್ಲಿ ವಿವಾದಾತ್ಮಕ ಪಾತ್ರ ನಿರ್ವಹಿಸಿದ್ದೇನೆ. ಹಲವರಿಗೆ ಬೈದಿದ್ದೇನೆ. ಹೆಚ್ಚಾಗಿ ಬೈಸಿಕೊಂಡಿದ್ದೇನೆ. ಆದರೆ, ಅವೆಲ್ಲ ನೆನಪುಗಳು ಅಷ್ಟೆ.
ಆದರೆ, ಈ ಗಣೇಶನಿಗಿರುವ ಸೆಳೆತ ಎಂಥದ್ದು ನೋಡಿ. ಆ ಒಂದೆರಡು ದಿನಗಳ ಮಟ್ಟಿಗೆ ಇಡೀ ಊರನ್ನೇ ಒಂದೆಡೆ ತೆಪ್ಪಗೆ ಕೂರಿಸುತ್ತಾನೆ. ಬೊಬ್ಬರ್ಯನ ಜಾತ್ರೆಯ ದಿನವೂ ಇಡೀ ಊರನ್ನುದ್ದೇಶಿಸಿ ಭಾಷಣ ಮಾಡಲು ಅಸಾಧ್ಯ. ಆದರೆ, ಇಲ್ಲಿ ಸಂಜೆ 5ರಿಂದ ರಾತ್ರಿ 10.30ರ ವರೆಗೆ ಊರಿನ ಪ್ರತಿ ಮನೆಯಿಂದಲೂ ಜನರು ಕಲೆಯುತ್ತಾರೆ. ಯಾರು ಏನೇ ಸಂದೇಶ ನೀಡಲಿ, ಪ್ರಕಟಣೆ ಹೊರಡಿಸಲಿ ಪ್ರೀತಿಯಿಂದ ಕೇಳುತ್ತಾರೆ, ಪಾಲಿಸುತ್ತಾರೆ. ನನ್ನ ದೃಷ್ಟಿಯಲ್ಲಿ ಕಡ್ತಲದಲ್ಲಿ ನಡೆಯುವ ಏಕೈಕ ವಿಶಿಷ್ಟ ಹಬ್ಬ ಈ ಗಣೇಶನದ್ದು. ಇಂಥ ಗಣೇಶನಿಗೆ ನಮ್ಮೂರಿನಲ್ಲಿ 26 ತುಂಬಿದೆ. ಉತ್ಸವಕ್ಕೆ ಒಂದು ಅಚ್ಚುಕಟ್ಟುತನ ಬಂದಿದೆ. 1987 ಇರಬೇಕು. ಊರಿನ ಹಿರಿಯ ಜೀವಗಳು ಒಟ್ಟಾಗಿ ಆಚರಣೆಗೆ ತಂದ ಉತ್ಸವವಿದು. 1990–92ರ ವೇಳೆಗೆ ಗಣೇಶೋತ್ಸವದ ಛದ್ಮವೇಷ ಸ್ಪರ್ಧೆ ನೋಡಲೇಂದೇ ಇಡೀ ಊರು ಸೇರುತ್ತಿತ್ತು. ಅಂದಿನ ಹುಡುಗರೂ ಅಷ್ಟೇ ಅದೆಲ್ಲಿಂದ ಕಲಾತ್ಮಕ ವಿಷಯಗಳನ್ನು ಎತ್ತಿಕೊಂಡು ಬರುತ್ತಿದ್ದರೋ ಗೊತ್ತಿಲ್ಲ. ನನಗಿನ್ನೂ ನೆನಪಿದೆ. ಬಹುಶಃ ಜಿಯಾನಂದ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಉತ್ಸವವದು. ಅಂದು ಉತ್ಸವಕ್ಕೆ ಪಂಚಕಜ್ಜಾಯ ತಯಾರಿಸುವ ಅಡುಗೆ ಭಟ್ಟನ ವೇಷ ಹಾಕಿ ಅಧ್ಯಕ್ಷರೆಲ್ಲಿದ್ದಾರೆ ಎಂದೇ ಪ್ರಶ್ನಿಸಿದ್ದೆ. ಮರುವರ್ಷ ನಮ್ಮ ಪಕ್ಕದಮನೆಯ ಹುಡುಗ ಸಂತೋಷನೂ ಇಂಥದ್ದೇ ಪಾಕಶಾಸ್ತ್ರಜ್ಞನ ಪಾತ್ರ ನಿರ್ವಹಿಸಿದ್ದ.
ಕಡ್ತಲ ಅಜೆಕಾರು ರಸ್ತೆಯಲ್ಲಿ ಉದ್ದಕ್ಕೆ ಕಲ್ಲು ಮರಳು ರಾಶಿ ಮಾಡಿ ಏನೇನೋ ಗೊಣಗುತ್ತಿದ್ದ ಹುಚ್ಚಿ ‘ಬೊಗ್ಗಿ’ಯ ವೇಷ ಹಾಕಿ ವೇದಿಕೆಗೆ ಬಂದವರಿದ್ದಾರೆ. ಬಲೀಂದ್ರನನ್ನು ಕರೆಯುವ ದೀಪಾವಳಿಯನ್ನು ಅಣಕಿಸಿ ‘ಬೈತಮುಟ್ಟೆಗೆ ಸೂಕೊಟ್ರೋ’ ( ಹೊಲಿ ಕೊಟ್ರೋ ಬಲಿ ತಕ್ಕಂಡ್ರೋ ಎಂಬ ಕೂಗು)( ಬೈಹುಲ್ಲಿನ ರಾಶಿಗೆ ಬೆಂಕಿ ಕೊಟ್ಟರು)ಎಂದು ಕನ್ನಡ –ತುಳು ಹಾಸ್ಯ ಮಿಶ್ರಣ ಮಾಡಿ ಗರ್ನಾಲ್ ಬಿಸಾಡುವ ಪಾತ್ರ ಮಾಡುತ್ತಿದ್ದ ಕಂಟೆಬೆಟ್ಟಿನ ನಿತ್ಯಾನಂದ ( ಈಗ ಮುಂಬೈ ಸೇರಿದ್ದಾನೆ). ಕೋಲ ಕಟ್ಟಿದವರಿದ್ದಾರೆ, ದರ್ಶನ ಪಾತ್ರಿಗಳಾಗಿದ್ದಾರೆ. ಚಂದಿರನೇತಕೆ ಓಡುವನಮ್ಮಾ ಎಂದು ಚೆಡ್ಡಿಹಾಕಿ ಪುಟ್ಟ ಮಕ್ಕಳ ಹಾಗೆ ಕುಣಿದ ಊರ ಯುವಕರು, ವೇದಿಕೆಯಿಂದಲೇ ಊರಿನ ಹಲವರ ಕಾಲೆಳೆದು ನಗಿಸಿದ್ದು... ಹೀಗೆ ಚಿತ್ರವಿಚಿತ್ರ ವೇಷ ಭೂಷಣ, ಡೈಲಾಗ್‌ಗಳನ್ನು ಹೊಡೆದು ಊರೆಲ್ಲಾ ನಗಿಸಿದ ಮಂದಿ ನಮ್ಮೂರಿನಲ್ಲಿ ಇದ್ದರು (ಇದ್ದಾರೆ ಅನ್ನುವುದಕ್ಕಿಂತ ಇದ್ದರು ಅನ್ನುವುದೇ ಹೆಚ್ಚು ಸೂಕ್ತ).
ಅಂದು ವಿಷಯ, ವಸ್ತುವಿನ ಆಯ್ಕೆ, ಅಭಿರುಚಿ, ಶಾಸ್ತ್ರ ಶಿಸ್ತಿಗಿಂತಲೂ ನಗಿಸುವುದೊಂದೇ ಪ್ರಧಾನ ಉದ್ದೇಶವಿತ್ತು. ಹೀಗೆ ಸುಮಾರು 19– 20ನೇ ವರ್ಷದ ಗಣೇಶೋತ್ಸವವನ್ನು ನೋಡುತ್ತಲೇ ಬಂದಿದೆ. ಈ ಮಧ್ಯೆ ಒಂದೆರಡು ವರ್ಷ ಸಂಪೂರ್ಣ ಡಲ್ಲು ಹೊಡೆದಿತ್ತು. ಇನ್ನೇನು ಮುಂದಿನ ವರ್ಷ ಗಣೇಶ ಹಬ್ಬವೇ ಇಲ್ಲವೇನೋ ಎಂಬ ಮಟ್ಟಕ್ಕೆ ಹೋಗಿತ್ತು. ಆದರೆ, ಒಂದೆರಡು ವರ್ಷಗಳಿಂದೀಚೆಗೆ ಒಂದು ಅದ್ಭುತವೇ ತೆರೆದುಕೊಂಡಿದೆ. ಭವ್ಯವಾದ ವೇದಿಕೆ. ಸ್ವಲ್ಪ ಡುಮ್ಮನೆನಿಸಿ ಎತ್ತರ ಬೆಳೆದ ಗಣೇಶ, ಲೈಟಿಂಗ್, ಧ್ವನಿ ಮಾಧುರ್ಯ ಅಬ್ಬಾ ಒಂದಾ ಎರಡಾ.... ನೋಡಿ ನಿಜಕ್ಕೂ ಖುಷಿಯಾಯಿತು.
ಆದರೆ? ಅಂದು ಊರಿನ ಹುಡುಗರೇ ಕಲೆತು ಗಣೇಶೋತ್ಸವದಲ್ಲಿ ಹೀಗೆ ಮಾಡಬೇಕು ಹಾಗೆ ಮಾಡಬೇಕು ಎಂದು ಹಾಕುತ್ತಿದ್ದ ಯೋಜನೆಗಳು ಇಲ್ಲವಾಗಿದೆ. ಸುತ್ತ ಮಕ್ಕಳನ್ನು ಸೇರಿಸಿಕೊಂಡು ಸುಶ್ರಾವ್ಯವಾಗಿ ವಿದ್ಯಾಭೂಷಣರ ಧ್ವನಿಯಲ್ಲಿಯೇ ಭಜನೆ ಹಾಡುತ್ತಿದ್ದ ದಿನೇಶನಾಯಕ್ ಇಲ್ಲವಾಗಿದ್ದಾರೆ. ಪದ್ಧತಿ ಬಿಡಬಾರದು ಎಂದು ಒಂದೆರಡು ಮಂದಿ ಭಜನೆ ಹಾಡುತ್ತಾರೆ. ಊರಿನ ಅದ್ಭುತ ದಾರ್ಶನಿಕರು ಮರೆಗೆ ಸರಿದಿದ್ದಾರೆ. ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಊರಿನ ಹುಡುಗರು ಕಾಣಿಸುತ್ತಿಲ್ಲ. ಸಾಂಸ್ಕೃತಿಕ ಸ್ಪರ್ಧೆಗಳಿಗೆ ಮಕ್ಕಳನ್ನು ಬಲವಂತವಾಗಿ ಕರೆತರಬೇಕಾದ ಪರಿಸ್ಥಿತಿಯಿದೆ. ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಬೇರೆ ಊರಿನಿಂದ ದುಡ್ಡುಕೊಟ್ಟು ಕರೆಸಿದ ತಂಡಗಳು ಮೆರೆಯಲು ಅವಕಾಶ ಕೊಟ್ಟಿದ್ದಾರೆ. ಊರ ಹುಡುಗರ ಹಾಸ್ಯ ಸಂಭಾಷಣೆ, ಪಂಚ್‌ಗಳು ಸಭಾಮಂಟಪದ ಹೊರಗಷ್ಟೇ ಕೇಳಿಸುತ್ತಿವೆ.
ನಮ್ಮದಲ್ಲದ್ದನ್ನು ನಮ್ಮೂರ ಜನ ಅಷ್ಟು ಸುಲಭವಾಗಿ ಸ್ವೀಕರಿಸುವುದಿಲ್ಲ ಎಂಬುದಕ್ಕೆ ಮೊನ್ನೆ ನಡೆದ ‘ವಠಾರ’ ನಾಟಕ ಉದಾಹರಣೆ. ಒಳ್ಳೆಯ ಕಥೆ, ರಂಗ ವಿನ್ಯಾಸ ಇದ್ದರೂ ಪ್ರೇಕ್ಷಕರು ಮೊದಲಾರ್ಧದಲ್ಲಿಯೇ ಖಾಲಿಯಾದರು. ನಮ್ಮೂರ ಹುಡುಗರ ಆಟ– ನಾಟಕ ಹೇಗೇ ಇರಲಿ. ಬೇಕಿದ್ದರೆ ಕಳಪೆಯೇ ಆಗಲಿ ನಮ್ಮ ಮಕ್ಕಳದ್ದು ಎಂಬಂತೆ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಇದನ್ನು ನಾವು ತಿಳಿದುಕೊಳ್ಳಬೇಕು. ನನಗೊಂದು ಆಸೆಯಿದೆ. ನಮ್ಮೂರಿನ ಗಣೇಶನ ವೇದಿಕೆ ನಮ್ಮವರಿಗಾಗಿಯೇ ಇರಬೇಕು. ನಮ್ಮ ಹುಡುಗರೇ ಕಾಣಿಸಿಕೊಳ್ಳಬೇಕು. ಇಲ್ಲಿ ಮಿಂಚಿದವರನ್ನು ಬೇರೆ ಊರಿನವರು ಕರೆಯಬೇಕು. ನನ್ನ ಗೆಳೆಯರು ಮಾಡುತ್ತಾರಾ?
ಪ್ರೀತಿಯಿಂದ
- ಶರತ್ ಹೆಗ್ಡೆ, ಕಡ್ತಲ

No comments:
Post a Comment