ಪ್ರಜಾವಾಣಿ ವಾರ್ತೆ/ ಶರತ್ ಹೆಗ್ಡೆ
22 ಡಿಸೆಂಬರ್ 2014, 11:30 IST
ಕೊಪ್ಪಳ: ನಗರದ ಹೊರವಲಯದ
ಮಳೆ ಮಲ್ಲೇಶ್ವರ ದೇವಸ್ಥಾನದ ಪರಿಸರ ಕಾಪಾಡಬೇಕಿದೆ. ಅದ್ಭುತ ನಿಸರ್ಗ ಸೃಷ್ಟಿಯ ನಡುವೆ ಇರುವ ಈ
ದೇವಸ್ಥಾನ ಜೀವ ವೈವಿಧ್ಯ- ಅಧ್ಯಾತ್ಮಿಕತೆ- ಪರಿಸರ ವಿಜ್ಞಾನದ ಕೌತುಕಗಳು ಒಂದೆಡೆ ಸಮ್ಮಿಳಿತಗೊಂಡ
ತಾಣ.
ಇದು ಇಂದ್ರಕೀಲ ಪರ್ವತ. ಮಳೆಮಲ್ಲೇಶ್ವರ ದೇವರು ಇಲ್ಲಿ ಲಿಂಗರೂಪಿಯಾಗಿದ್ದಾನೆ. ಪ್ರತಿ ದಿನ ಭಕ್ತರು ಈ ಪ್ರಶಾಂತ ಪರಿಸರದಲ್ಲಿ ಪೂಜೆ ಸಲ್ಲಿಸುತ್ತಾರೆ. ಮಂಗಗಳು, ಅಪರೂಪದ ಹಕ್ಕಿ ಗಳು, ಸರಿಸೃಪಗಳು ಈ ಪರಿಸರದಲ್ಲಿ ಸಾಕಷ್ಟಿವೆ.
ಗವಿಮಠದ ಗವಿಸಿದ್ದೇಶ್ವರ ಸ್ವಾಮಿಯು ತಮ್ಮ ಪೂರ್ವಾಶ್ರಮದಲ್ಲಿ ಗುಡದಯ್ಯ ಹೆಸರಿನ ಬಾಲಕನಾಗಿ ಇಲ್ಲಿ ದನ ಕಾಯುತ್ತಿದ್ದರು. ಇಲ್ಲಿಂದಲೇ ಅವರ ಪವಾಡ, ಮಹಿಮೆಗಳು ಕಾಣತೊಡಗಿದವು. ಮುಂದೆ ಅವರು ಗವಿಸಿದ್ದ ಸ್ವಾಮಿಯಾದರು ಎಂಬ ಕಥೆಯೇ ಇದೆ.
ಇಂಥ ಇತಿಹಾಸ ಹೊಂದಿದ ಅಧ್ಯಾತ್ಮದ ತಾಣವೊಂದು ದಿನ ದಿನವೂ ತನ್ನ ಪಾವಿತ್ರ್ಯತೆ ಕಳೆದುಕೊಳ್ಳುತ್ತಿದೆ ಎಂಬುದು ಭಕ್ತರ ಬೇಸರ.
ಮದುವೆ, ಸಭೆ ಸಮಾರಂಭಗಳಿಗಾಗಿ ಇಲ್ಲಿ ಮಂಟಪವೊಂದಿದೆ. ಸಮಾರಂಭದ ಹೆಸರಿನಲ್ಲಿ ಹಾಕುವ ದ್ವನಿವರ್ಧಕ, ಅದರಲ್ಲಿ ಮೊಳಗುವ ಕರ್ಕಶ ಹಾಡುಗಳು ಅಧ್ಯಾತ್ಮದ ವಾತಾವರಣವನ್ನು ಕೆಡಿಸುತ್ತಿವೆ. ಇಲ್ಲಿ ನೀರಿನ ತೊಟ್ಟಿಗಳು ವಾಹನ ತೊಳೆಯಲು ಬಳಕೆಯಾಗುತ್ತಿವೆ. ಮತ್ತಷ್ಟು ಕಲ್ಮಶ ಹೆಚ್ಚಾಗುತ್ತಿದೆ.
ದೇವಸ್ಥಾನದ ಆಸುಪಾಸು ಅಭಿವೃದ್ಧಿಯ ಹೆಸರಿನಲ್ಲಿ ಕಲ್ಲು ಬಂಡೆಗಳನ್ನು ಬೇಕಾಬಿಟ್ಟಿ ಒಡೆದು ಹಾಕಲಾಗಿದೆ. ನಿಸರ್ಗ ಸಹಜ ಸುಂದರ ಪ್ರದೇಶ ಅಭಿವೃದ್ಧಿಯ ಹೆಸರಿನಲ್ಲಿ ವಿರೂಪ ಗೊಳ್ಳುತ್ತಿದೆ ಎಂಬುದು ಭಕ್ತರ ಆರೋಪ.
ದೇವಸ್ಥಾನಕ್ಕೆ ಬರಲು ಉತ್ತಮ ಕಾಂಕ್ರಿಟ್ ರಸ್ತೆಯಿದೆ. ಆದರೆ, ವಾಸ್ತವವಾಗಿ ಈ ಭಾಗದಲ್ಲಿ ಅಕ್ರಮವಾಗಿ ಕಲ್ಲು ಒಡೆಯುವವರ ಟ್ರ್ಯಾಕ್ಟರ್ ಓಡಾಡಲು ಈ ರಸ್ತೆ ಹೆಚ್ಚು ಬಳಕೆಯಾಗುತ್ತಿದೆ. ಇಂದ್ರಕೀಲ ಪರ್ವತದ ಹಿಂಭಾಗದ ನಿಷೇಧಿತ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಮಾಧ್ಯಮಗಳಲ್ಲಿ ಸುದ್ದಿಯಾದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಇದುವರೆಗೆ ಕ್ರಮಕೈಗೊಂಡಿಲ್ಲ. ಕ್ಷೇತ್ರದ ಪಾವಿತ್ರ್ಯ ಪೂರ್ತಿ ವಿರೂಪಗೊಳ್ಳುವ ಮುನ್ನ ದೇವಸ್ಥಾನ ಸಮಿತಿಯವರಾದರೂ ಅದನ್ನು ತಡೆಯಲು ಮುಂದಾಗಬೇಕು ಎಂದು ಭಕ್ತ ಗವೀಶ ಒತ್ತಾಯಿಸಿದರು.
ರಾತ್ರಿ ವೇಳೆ ಇದೇ ಬೆಟ್ಟದ ಹಾದಿಯಲ್ಲಿ ಕುಡುಕರ ಪಾನಗೋಷ್ಠಿ ನಡೆಯುತ್ತದೆ. ಮಾರ್ಗದ ಇಕ್ಕೆಲಗಳಲ್ಲಿ ಬಾಟಲಿ ಚೂರು, ಸಿಗರೇಟ್, ಗುಟ್ಕಾ ಪ್ಯಾಕೆಟ್ ಕಾಣಸಿಗುತ್ತವೆ. ಸಾಲದ್ದಕ್ಕೆ ಮಾರ್ಗದಲ್ಲೇ ಶೌಚ ಮಾಡುವವರೂ ಇದ್ದಾರೆ. ಪ್ರವಾಸಿ ತಾಣವನ್ನಾಗಿಸುವ ಹೆಸರಿನಲ್ಲಿ ಕ್ಷೇತ್ರವನ್ನು ವಿರೂಪಗೊಳಿಸುವ ಕೆಲಸವೂ ಆಗುತ್ತಿದೆ. ಬೆಟ್ಟದಿಂದ ಮಳೆಮಲ್ಲೇಶ್ವರ ದೇವರು ಇಳಿದು ದೂರ ಹೋಗುವ ಮುನ್ನ ದೇವಸ್ಥಾನದ ಆಡಳಿತ ಸಮಿತಿ ಎಚ್ಚೆತ್ತುಕೊಳ್ಳಬೇಕು ಎಂದು ಭಕ್ತರು ಒತ್ತಾಯಿಸುತ್ತಿದ್ದಾರೆ.

No comments:
Post a Comment